ಮುಂಬೈ[ನ.18]: ಇಟಲಿಯಲ್ಲಿ ಮದುವೆಯದ ಬಾಲಿವುಡ್‌ನ ತಾರಾ ಜೋಡಿ ದೀಪಿಕಾ ಹಾಗೂ ರಣವೀರ್ ಸಿಂಗ್ ಕೊನೆಗೂ ಮುಂಬೈಗೆ ಬಂದಿಳಿದಿದ್ದಾರೆ. ಹಣೆಗೆ ಕಡುಗೆಂಪು ಬಣ್ಣದ ಸಿಂಧೂರವಿಟ್ಟು ಕಂಗೊಳಿಸುತ್ತಿದ್ದ ದೀಪಿಕಾ ತನ್ನ ಗಂಡ ರಣವೀರ್ ಸಿಂಗ್ ಕೈ ಹಿಡಿದು ಅಭಿಮಾನಿಗಳೆದುರು ಬಂದು ಧನ್ಯವಾದ ತಿಳಿಸಿದ್ದಾರೆ. 

ಗುರುವಾರವಷ್ಟೇ ಈ ನವ ದಂಪತಿಯ ಮದುವೆ ಫೋಟೋಗಳು ಎಲ್ಲರ ಕಣ್ಮನ ಸೆಳೆದಿದ್ದವು. ಬಾಲಿವುಡ್ ತಾರೆಯರ ಮದುವೆಯು ಎಲ್ಲರಲ್ಲೂ ಕುತೂಹಲ ಮೂಡಿಸಿತ್ತು. ಆದರೆ ಈ ಲವ್ ಬರ್ಡ್ಸ್ ಮದುವೆಯು ಬಹಳಷ್ಟು ವ್ಯವಸ್ಥಿತವಾಗಿ ಹಾಗೂ ಖಾಸಗಿಯಾಗಿ ನಡೆದಿದ್ದು, ವಧು ವರರ ಫೋಟೋಗಳು ಒಂದೆಡೆಯೂ ಯಾರೊಬ್ಬರಿಗೂ ಸಿಕ್ಕಿರಲಿಲ್ಲ. ಇಟಲಿಯಲ್ಲಿ ಮದುವೆಯಾಗಿ ಇಂದು ಮುಂಬೈಗೆ ಅಗಮಿಸಿರುವ ಈ ಜೋಡಿ ಹಕ್ಕಿಯ ಆರತಕ್ಷತೆ ಕಾರ್ಯಕ್ರಮವು 21ರಂದು ಬೆಂಗಳೂರು ಹಾಗೂ 28ರಂದು ಮುಂಬೈನಲ್ಲಿ ನಡೆಯಲಿದೆ. ಕುಟುಂಬ ಸದಸ್ಯರು, ಬಾಲಿವುಡ್ ಸ್ಟಾರ್ಸ್ ಸೇರಿದಂತೆ ಅನೇಕ ಗಣ್ಯರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.