ಅಮರಾವತಿ (ಡಿ. 24): ‘ಲಕ್ಷ್ಮೀ’ಸ್ ಎನ್‌ಟಿಆರ್’ ಚಿತ್ರದಲ್ಲಿ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಬಗ್ಗೆ ವಿವಾದಾತ್ಮಕವಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿದೆ.

ಕರ್ನೂಲ್ ಶಾಸಕ ಎಸ್.ವಿ ಮೋಹನ್ ರೆಡ್ಡಿ ಶನಿವಾರವೇ ಈ ಸಂಬಂಧ ಕೇಸ್ ದಾಖಲಿಸಿದ್ದಾರೆ. ಲಕ್ಷ್ಮೀ’ಸ್ ಎನ್‌ಟಿಆರ್ ಚಿತ್ರದ ಗೀತೆಯೊಂದರಲ್ಲಿ ನಾಯ್ಡು ಅವರು ಟಿಡಿಪಿ ಸಂಸ್ಥಾಪಕ ಎನ್.ಟಿ. ರಾಮ್‌ರಾವ್ ಅವರ ಬೆನ್ನಿಗೆ ಚೂರಿ ಹಾಕಿ, ಅಧಿಕಾರಕ್ಕೆ ಬಂದರು ಎಂಬಂತೆ ಚಿತ್ರಿಸಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳ ಬೇಕು ಎಂದು ಶಾಸಕ ರೆಡ್ಡಿ ಆಗ್ರಹಿಸಿದ್ದಾರೆ.