ತಮಿಳು ನಟ ರಜಿನಿಕಾಂತ್  ಅವರಿಗೆ ಸಂಕಷ್ಟ ಎದುರಾಗಿದೆ. ಅವರ ಹೊಸ ಚಿತ್ರಕ್ಕೆ ನೀಡಿದ ಪ್ರಮಾಣ ಪತ್ರ ಹಿಂಪಡೆಯಲು ಸಿಬಿಎಫ್‌ಸಿಗೆ ಸೆಲ್ಯೂಲರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ(ಸಿಒಎಐ) ಸಂಸ್ಥೆ ದೂರು ದಾಖಲಿಸಿದೆ. 

ಚೆನ್ನೈ: ರಜನೀಕಾಂತ್ ಅಭಿನಯದ 2.0 ಚಿತ್ರದ ಬಿಡುಗಡೆಗೆ 2 ದಿನಗಳ ಬಾಕಿಯಿರುವ ಉಳಿದಿರು ವಂತೆಯೇ, ಚಿತ್ರಕ್ಕೆ ನೀಡಲಾದ ಪ್ರಮಾಣ ಪತ್ರ ಹಿಂಪಡೆಯಬೇಕು ಎಂದು ಕೋರಿ ಸಿಬಿಎಫ್‌ಸಿಗೆ ಸೆಲ್ಯೂಲರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ(ಸಿಒಎಐ) ಸಂಸ್ಥೆ ದೂರು 
ದಾಖಲಿಸಿದೆ. 

ಚಿತ್ರದಲ್ಲಿ ಪ್ರಾಣಿತಜ್ಞರಾದ ಅಕ್ಷಯ್ ಕುಮಾರ್, ಹಕ್ಕಿಗಳು ಮತ್ತು ಪ್ರಾಣಿಗಳ ಮೇಲೆ ದುಷ್ಪರಿಣಾಮ ಬೀರುವ ವಾತಾವರಣಕ್ಕೆ ಮೊಬೈಲ್ ವಿಕಿರಣಗಳೇ ಕಾರಣ ಎಂದು ಮೊಬೈಲ್ ಬಳಕೆದಾರರನ್ನು ನಿಂದಿಸುತ್ತಾರೆ. 

ಇದರಿಂದ ಸಮಾಜಕ್ಕೆ ತಪ್ಪು ಮಾಹಿತಿ ರವಾನೆಯಾಗುತ್ತದೆ ಎಂದು ಅದು ಹೇಳಿದೆ.