ಬೆಂಗಳೂರು (ಜ. 30): ಚಿತ್ರರಂಗದ ಸೆಲಬ್ರಿಟಿಗಳ ನಡುವೆ ಮುನಿಸು ಇರುತ್ತೋ ಇಲ್ವೋ ಗೊತ್ತಿಲ್ಲ ಆದರೆ ಅವರ ಅಭಿಮಾನಿಗಳ ನಡುವೆ ಕಿತ್ತಾಟ ನಡೆಯುತ್ತಲೇ ಇರುತ್ತದೆ. ಇದೀಗ ಪುನೀತ್ ಹಾಗೂ ಯಶ್ ಅಭಿಮಾನಿಗಳ ನಡುವೆ ಜಗಳ ಶುರುವಾಗಿದೆ. 

ಯಶ್ ಸೂಪರ್ ಹಿಟ್ ಮೂವಿ ಕೆಜಿಎಫ್ ಗೆ ಪುನೀತ್ ಅಭಿಮಾನಿಗಳು ಸಖತ್ ಬೆಂಬಲ ನೀಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಪ್ರಮೋಶನ್ ನೀಡಿದ್ದರು.ಫ್ಯಾನ್ಸ್ ಶೋವನ್ನು ಮಾಡಿದ್ದರು. 

ಈಗ ಪುನೀತ್ ನಟನೆಯ ನಟಸಾರ್ವಭೌಮ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಫೆ. 7 ಕ್ಕೆ ರಿಲೀಸಾಗಲಿದೆ. ಆದರೆ ನಟಸಾರ್ವಭೌಮ ಪ್ರಮೋಶನ್ ಗೆ ಯಶ್ ಫ್ಯಾನ್ಸ್ ಗಳು ಬೆಂಬಲ ನೀಡಿಲ್ಲದೇ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ. ನಿಮಗೆ ನಿಯತ್ತಿರಲಿ ಎಂದು ಯಶ್ ಅಭಿಮಾನಿಗಳು ಪುನೀತ್ ಅಭಿಮಾನಿಗಳಿಗೆ ಹೇಳಿದ್ದಾರೆ.