ಮುಂಬೈ (ಫೆ. 25):  ಕಾಫಿ ವಿತ್ ಕರಣ್ ನಲ್ಲಿ ಕರೀನಾ ಕಪೂರ್, ಪ್ರಿಯಾಂಕ ಚೋಪ್ರಾ ಒಬ್ಬರಿಗೊಬ್ಬರು ಕಾಲೆಳೆದುಕೊಂಡಿದ್ದಾರೆ. 

ಮಗಳು ಸಾರಾ ಖಾನ್ ಗೆ ಜೋಡಿ ಹುಡುಕಿದ ತಾಯಿ ಕರೀನಾ!

ಕಾಫಿ ವಿತ್ ಕರಣ್ ನಲ್ಲಿ ಪ್ರಿಯಾಂಕ ಹಾಗೂ ಕರೀನಾ ಭಾಗವಹಿಸಿದ್ದರು. ಈ ವೇಳೆ ಕರೀನಾ, ಪ್ರಿಯಾಂಕ ಮಾತಿನ ಆ್ಯಕ್ಸೆಂಟ್ ಬಗ್ಗೆ ಮಾತನಾಡುತ್ತಾ, "ಪ್ರಿಯಾಂಕಾಗೆ ಈ ಆ್ಯಕ್ಸೆಂಟ್ ಎಲ್ಲಿಂದ ಬಂತು"? ಎಂದು ಕೇಳಿದರು. ಕೂಡಲೇ ಪ್ರಿಯಾಂಕ ’ ಕರೀನಾ ಪತಿ ಸೈಫ್ ಅಲಿ ಖಾನ್ ಎಲ್ಲಿ ಆ್ಯಕ್ಸೆಂಟ್ ಕಲಿತರೋ ಅಲ್ಲಿಂದಲೇ ನಾನು ಕಲಿತಿದ್ದು' ಎಂದು  ಹೇಳಿದರು.

Period. End of Sentence' ಗೆ ಅತ್ಯುತ್ತಮ ಸಾಕ್ಷ್ಯ ಚಿತ್ರ ಪ್ರಶಸ್ತಿ

ಇಡೀ ಶೋನಲ್ಲಿ ಕರೀನಾ ಹಾಗೂ ಪ್ರಿಯಾಂಕ ಒಬ್ಬರಿಗೊಬ್ಬರು ಕಾಲೆಳೆದುಕೊಂಡರು. ಇಬ್ಬರ ನಡುವಿನ ಕೋಲ್ಡ್ ವಾರ್ ಗೆ ಇಬ್ಬರ ಮಾಜಿ ಬಾಯ್ ಫ್ರೆಂಡ್ ಶಾಹೀದ್ ಕಪೂರ್ ಕಾರಣವಂತೆ! 

ಕೊನೆಗೆ ಪಿಗ್ಗಿ ಸ್ಪಷ್ಟೀಕರಣ ಕೊಡುತ್ತಾ, "ಯಾರನ್ನೂ ಹಿಯಾಳಿಸುವ ಉದ್ದೇಶ ಇರಲಿಲ್ಲ. ಸ್ನೇಹಿತೆ ಕರೀನಾ ಸುಮ್ಮನೆ ಕಾಲೆಳೆದರು" ಎಂದು ಹೇಳಿದರು. ಪಿಗ್ಗಿ ಮಾತಿಗೆ ಕರೀನಾ ಹೌದೌದು... ಖಂಡಿತಾ ಎಂದರು.