ಮುಂಬೈ(ಅ.5): ಭದ್ರತಾ ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿಕೊಂಡು ವಾಂಖೆಡೆ ಸ್ಟೇಡಿಯಂಗೆ ನಿಷೇಧ ಹೊಂದಿದ್ದ ಶಾರೂಖ್ ಖಾನ್​ಗೆ ಮುಂಬೈ ಪೊಲೀಸ್ ಕ್ಲೀನ್ ಚೀಟ್ ನೀಡಿದ್ದಾರೆ. 2012ರಲ್ಲಿ ಐಪಿಎಲ್​ ಪಂದ್ಯದ ವೇಳೆ ಮೈದಾನ ಪ್ರವೇಶಿಸಲು ಯತ್ನಿಸಿದ್ದ ಶಾರುಖ್ ಖಾನ್​ನನ್ನ ಭದ್ರತಾ ಸಿಬ್ಬಂದಿ ತಡೆದಿದ್ದರು. ಅವರ ಮೇಲೆ ಶಾರೂಖ್ ಹಲ್ಲೆ ಮಾಡಿದ್ದರು. ಹೀಗಾಗಿ ಮುಂಬೈ ಕ್ರಿಕೆಟ್ ಸಂಸ್ಥೆ ಶಾರೂಖ್​ಗೆ ನಿಷೇಧ ಹೇರಿತ್ತು. ಇದು ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಆದ್ರೆ ಈಗ ಮುಂಬೈ ಪೊಲೀಸ್ ಕಿಂಗ್ ಖಾನ್​ಗೆ ಕ್ಲೀಕ್ ಚೀಟ್ ನೀಡಿದ್ದಾರೆ.