ಸಾಮಾಜಿಕ ಜಾಲತಾಣದಲ್ಲಿ ಸೌಂಡ್ ಮಾಡುತ್ತಿದೆ ವಧುವಿನ ಡ್ಯಾನ್ಸ್.. ಏನಿದರ ವಿಶೇಷ..?

First Published 14, Mar 2018, 2:27 PM IST
Clad in Choli and Jeans bride Performs Bhangra
Highlights

ಇಲ್ಲಿ ಓರ್ವ ಯುವತಿ ಒಂದು ಸುಂದರವಾದ ದಿನವನ್ನು ಹೇಗೆ ಎಂಜಾಯ್ ಮಾಡಬೇಕು ಎನ್ನುವುದನ್ನು ವಿಡಿಯೋ ಮೂಲಕ ತಿಳಿಸಿಕೊಟ್ಟಿದ್ದಾಳೆ. ಇದೀಗ  ಈ ಯುವತಿ  ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪ್ರಮಾಣದಲ್ಲಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಯುವತಿಯ ವಿಡಿಯೋ ಸಕತ್ ಸೌಂಡ್ ಮಾಡುತ್ತಿದೆ.

ನವದೆಹಲಿ : ಇಲ್ಲಿ ಓರ್ವ ಯುವತಿ ಒಂದು ಸುಂದರವಾದ ದಿನವನ್ನು ಹೇಗೆ ಎಂಜಾಯ್ ಮಾಡಬೇಕು ಎನ್ನುವುದನ್ನು ವಿಡಿಯೋ ಮೂಲಕ ತಿಳಿಸಿಕೊಟ್ಟಿದ್ದಾಳೆ. ಇದೀಗ  ಈ ಯುವತಿ  ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪ್ರಮಾಣದಲ್ಲಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಯುವತಿಯ ವಿಡಿಯೋ ಸಕತ್ ಸೌಂಡ್ ಮಾಡುತ್ತಿದೆ.

ರಾಶಿಕಾ ಯಾದವ್ ಎನ್ನುವ ಈಕೆ ತನ್ನ ಮದುವೆಯ ದಿನವನ್ನು ಈ ರೀತಿಯಾಗಿ ಸಕತ್ ಎಂಜಾಯ್ ಮಾಡಿದ್ದಾರೆ.  ಮೆಹೆಂದಿ ಲಗಾಕೆ ರಕ್ನಾ ಸೇರಿದಂತೆ ಕೆಲವು ಹಾಡಿಗೆ  ಜೀನ್ಸ್ ಹಾಗೂ ಚೋಲಿ ಹಾಕಿಕೊಂಡು  ವಿನೂತನ ಶೈಲಿಯಲ್ಲಿ ಹೆಜ್ಜೆ ಹಾಕಿದ್ದಾಳೆ.

ರಾಶಿಕಾ ಚೋಲಿ ಹಾಗೂ ಜೀನ್ಸ್’ನಲ್ಲಿ ನೃತ್ಯ ಮಾಡಿರುವ ವಿಡಿಯೋವನ್ನು  ದಿಲ್ಲಿ ಮೂಲದ ಫೊಟೊಗ್ರಾಫರ್ ಆದ ಪ್ರಿಯಾಂಕ ಕಂಬೋಜ ಚೋಪ್ರಾ ಎನ್ನುವವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.  ಈಕೆಯ ವಿನೂತನ ಶೈಲಿನ ಬಾಂಗ್ರಾ ನೃತ್ಯವೂ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಸೌಂಡ್ ಮಾಡುತ್ತಿದೆ. ಇದುವರೆಗೂ ಲಕ್ಷಾಂತರ ಜನರು ಈಕೆಯ ವಿಡಿಯೋವನ್ನು ವೀಕ್ಷಿಸಿದ್ದು, ಸಾವಿರಾರು ಜನರು ಶೇರ್ ಮಾಡಿದ್ದಾರೆ.

 

 

#Kadar

A post shared by Mankirt Aulakh (ਔਲਖਾ ਦਾ ਮੁੰਡਾ) (@mankirtaulakh) on

loader