Asianet Suvarna News Asianet Suvarna News
breaking news image

ನರೇಂದ್ರ ಮೋದಿ ಪದಗ್ರಹಣಕ್ಕೆ ಸಾಕ್ಷಿಯಾದ ಸಿನಿಮಾ ಸ್ಟಾರ್‌ಗಳು

ನರೇಂದ್ರ ಮೋದಿ ಪದಗ್ರಹಣ ಕಾರ್ಯಕ್ರಮದಲ್ಲಿ 10 ಸಾವಿರಕ್ಕೂ ಅಧಿಕ ಗಣ್ಯರು ಹಾಜರಾಗಿದ್ದರು. ನಟರಾದ ಶಾರೂಖ್ ಖಾನ್, ವಿಕ್ರಾಂತ್ ಮೆಸ್ಸಿ, ಅಕ್ಷಯ್ ಕುಮಾರ್, ರಜಿನಿಕಾಂತ್ ಆಗಮಿಸಿದ್ದಾರೆ.

Cinema Stars Attend Narendra Modi Swearing-In Ceremony mrq
Author
First Published Jun 9, 2024, 7:30 PM IST

ನವದೆಹಲಿ: ಇಂದು ಭಾರತದ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ (Narendra Modi) ಮೂರನೇ ಬಾರಿ ಪ್ರಮಾಣವಚನ ಸ್ವೀಕರಿಸಿದ್ದರು. ರಾಷ್ಟ್ರಪತಿ ಭವನದ ಮುಂಭಾಗ ನಡೆದ ಸಮಾರಂಭಕ್ಕೆ ದೇಶ-ವಿದೇಶದ ಗಣ್ಯರು ಸಾಕ್ಷಿಯಾದರು. ಧಾರ್ಮಿಕ ಮುಖಂಡರು, ಬಾಲಿವುಡ್ ಸ್ಟಾರ್‌ಗಳು ಆಗಮಿಸಿದರು.  ನರೇಂದ್ರ ಮೋದಿ ಪದಗ್ರಹಣ ಕಾರ್ಯಕ್ರಮದಲ್ಲಿ 10 ಸಾವಿರಕ್ಕೂ ಅಧಿಕ ಗಣ್ಯರು ಹಾಜರಾಗಿದ್ದರು. ನಟರಾದ ಶಾರೂಖ್ ಖಾನ್, ವಿಕ್ರಾಂತ್ ಮೆಸ್ಸಿ, ಅಕ್ಷಯ್ ಕುಮಾರ್, ರಜಿನಿಕಾಂತ್ ಹಾಗೂ ನಟಿ ಸೋನಾಲಿ ಬೇಂದ್ರೆ ಖ್ಯಾತ ನಿರ್ದೇಶಕ ರಾಜ್‌ಕುಮಾರ್ ಹಿರಾಣಿ ಆಗಮಿಸಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿರುವ ನಟಿ ಹೇಮಾ ಮಾಲಿನಿ ಮತ್ತು ಕಂಗನಾ ರಣಾವತ್ ಸಹ ಆಗಮಿಸಿದ್ದಾರೆ. ಮಂಡಿ ಲೋಕಸಭಾ ಕ್ಷೇತ್ರದಿಂದ ಗೆದ್ದಿರೋ ಕಂಗನಾ ರಣಾವತ್ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದ್ದಾರೆ. ಚಿರಾಗ್ ಪಾಸ್ವಾನ್ ಸಹ ಸಿನಿಮಾಗಳಲ್ಲಿ ನಟಿಸಿದ್ದು, ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡಿದ್ದಾರೆ.

ಇದೊಂದು ಐತಿಹಾಸಿಕ ದಿನವಾಗಿದ್ದು, ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಮುಂದಿನ 5 ವರ್ಷ ಎನ್‌ಡಿಎ ಆಡಳಿತಕ್ಕಾಗಿ ನಾನು ಕಾಯುತ್ತಿದ್ದೇನೆ. ಕಳೆದ 10 ವರ್ಷಗಳಲ್ಲಿ ಉತ್ತಮ ಕೆಲಸ ಮಾಡಲಾಗಿದ್ದು, ಹೊಸ ಬದಲಾವಣೆಗಳಿಗೆ ನಾನು ಸಾಕ್ಷಿಯಾಗಿದ್ದೇನೆ. ಭಾರತವು ದೊಡ್ಡ ದೇಶವಾಗಿದ್ದು, ಬದಲಾವಣೆಯು ರಾತ್ರೋರಾತ್ರಿ ಸಂಭವಿಸುವುದಿಲ್ಲ, ಅದಕ್ಕೆ ಸಮಯ ಬೇಕಾಗುತ್ತದೆ ಎಂದು ಬಾಲಿವುಡ್ ನಟ ವಿಕ್ರಾಂತ್ ಮೆಸ್ಸಿ ಹೇಳಿದ್ದಾರೆ.

ಇನ್ನು  ಅಕ್ಷಯ್ ಕುಮಾರ್ ಮತ್ತು ಶಾರೂಖ್ ಖಾನ್ ಮುಖಾಮುಖಿಯಾಗಿದ್ದು, ಒಬ್ಬರಿಗೊಬ್ಬರು ಹಗ್ ಮಾಡಿಕೊಂಡು ಕುಶುಲೋಪಚಾರ ವಿಚಾರಿಸಿಕೊಂಡಿದ್ದಾರೆ. ಉದ್ಯಮಿ ಮುಖೇಶ್ ಅಂಬಾನಿ ಪುತ್ರ ಅನಂತ್‌ ಅಂಬಾನಿ ಜೊತೆ ಪದಗ್ರಹಣಕ್ಕೆ ಆಗಮಿಸಿದ್ದಾರೆ.

Latest Videos
Follow Us:
Download App:
  • android
  • ios