Asianet Suvarna News Asianet Suvarna News

ರಾಜಹುಲಿ ಬೆಡಗಿ ಜೊತೆ ವಾಯುಪುತ್ರನ ವಿವಾಹ

ಇಬ್ಬರು ಒಟ್ಟೊಟ್ಟಿಗೆ ಕಾಣಿಸಿಕೊಂಡು ಊಹಾಪೋಹಕ್ಕೆ ಮತ್ತಷ್ಠು ಪುಷ್ಠಿ ನೀಡಿದ್ದರು. ಎಷ್ಟೇ ವದಂತಿ ಹಬ್ಬಿದ್ದರೂ ಅದೆಲ್ಲ ಸುಳ್ಳು ಎಂದು ತೆರೆ ಎಳೆಯುತ್ತಲೇ ಬಂದಿದ್ದರು

Chiranjeevi Sarja Meghana Raj to get engaged on October 22

ರಾಜಾ ಹುಲಿ ಬೆಡಗಿ.. ವಾಯುಪುತ್ರ.. ಆಟಗಾರದಲ್ಲಿ ಜೊತೆಯಾಗಿ ರಂಜಿಸಿದವರು ಈಗ ಮತ್ತೊಮ್ಮೆ ಒಂದಾಗುತ್ತಿದ್ದಾರೆ. ಬಾಳ ಪಯಣದಲ್ಲಿ ಒಂದಾಗಿ ಸಾಗುವ ನಿರ್ಧಾರಕ್ಕೆ ಬಂದಿದ್ದಾರೆ. ಮೂಲಗಳ ಪ್ರಕಾರ ರಿಂಗ್ ಬದಲಾಯಿಸಲು ಮುಹೂರ್ತ ಕೂಡ ಫಿಕ್ಸ್ ಆಗಿದೆ. 

ಸ್ಯಾಂಡಲ್​ವುಡ್ ಆಕ್ಷನ್ ಹೀರೋ ಚಿರಂಜೀವಿ ಸರ್ಜಾ.. ಬಹುಭಾಷಾ ನಟಿ ಮೇಘನಾ.. ಆಟಗಾರ ಜೋಡಿ ಮೋಡಿಗೆ ಸಿನಿಪ್ರಿಯರು ಫಿದಾ ಆಗಿದ್ದರು. ಸೂಪರ್ ಜೋಡಿ ಎನಿಸಿಕೊಂಡಿದ್ದರು.ರೀಲ್ ಮೇಲಿನ ಜೋಡಿ.. ರಿಯಲ್​ನಲ್ಲೂ ಜೋಡಿಯಾಗ್ತಿದೆ ಅನ್ನೋದು ಸುದ್ದಿ ಎರಡು ವರ್ಷದಿಂದಲೂ ಹರಿದಾಡ್ತಿತ್ತು. ಇಬ್ಬರು ಒಟ್ಟೊಟ್ಟಿಗೆ ಕಾಣಿಸಿಕೊಂಡು ಈ ಊಹಾಪೋಹಕ್ಕೆ ಮತ್ತಷ್ಠು ಪುಷ್ಠಿ ನೀಡಿದ್ದರು. ಎಷ್ಟೇ ವದಂತಿ ಹಬ್ಬಿದ್ದರೂ ಅದೆಲ್ಲ ಸುಳ್ಳು ಎಂದು ತೆರೆ ಎಳೆಯುತ್ತಲೇ ಬಂದಿದ್ದರು. ಆದ್ರೀಗ  ಊಹಾಪೋಹವೇ ನಿಜವಾಗುತ್ತಿದೆ.  ಬಲ್ಲ ಮೂಲಗಳ ಪ್ರಕಾರ ಇದೇ 22 ಕ್ಕೆ ಸರಳವಾಗಿ ಮೇಘನಾ ಮತ್ತು ಚಿರು ನಿಶ್ಚಿತಾರ್ಥ ಆಗುತ್ತಿದೆ.

ಇಷ್ಟೇ ಅಲ್ಲ. ಮದುವೆ ಡೇಟ್ ಕೂಡ ಫಿಕ್ಸ್ ಆಗಿದಿಯಂತೆ. ಡಿಸೆಂಬರ್ 6 ರಂದು ಚಿರು ಮತ್ತು ಮೇಘನಾ ಮದುವೆ ನಡೆಯಲಿದಿಯಂತೆ. ಬಟ್ ಚಿರಂಜೀವಿ ಸರ್ಜಾ ಮಾತ್ರ ಇದು ಸುಳ್ಳು ಎನ್ನುತ್ತಿದ್ದಾರೆ. ಹಿಂದೆಲ್ಲಾ ಇವರಿಬ್ಬರು ಮದುವೆ ಆಗ್ತಾರೆ ಅನ್ನೋ ವದಂತಿಯಿತ್ತು.. ಆದರೆ ಈ ಬಾರಿ ಎಂಗೇಜ್​ಮೆಂಟ್ ಡೇಟ್ ಜೊತೆಗೆ ಮದುವೆ ಡೇಟ್ ಕೂಡ ಫಿಕ್ಸ್ ಆಗಿದೆ ಅನ್ನೋ ಸುದ್ದಿಯೂ ಹಬ್ಬಿದೆ. ಇದು ನಿಜವೋ, ಸುಳ್ಳೋ ಎಂಬ  ಉತ್ತರ ಸಿಗಬೇಕಂದರೆ ಅಭಿಮಾನಿಗಳು ಕಾಯಲೇಬೇಕು.

Latest Videos
Follow Us:
Download App:
  • android
  • ios