ಕಿಚ್ಚ ಸುದೀಪ್ -ಅನೂಪ್ ಭಂಡಾರಿ ಕಾಂಬಿನೇಶನ್‌ನಲ್ಲಿ ಬರಲಿದೆ ಹೊಸ ಚಿತ್ರ | ಸುದೀಪ್ ಜೊತೆ ನಟಿಸಲು ಬಾಲ ಕಲಾವಿದೆ ಬೇಕಾಗಿದ್ದಾರೆ | 

ಕಿಚ್ಚ ಸುದೀಪ್ ಜೊತೆ ನಟಿಸಲು ಒಂದೇ ಒಂದು ಅವಕಾಶ ಸಿಕ್ಕರೆ ಸಾಕು ಎಂದು ಕನಸು ಕಾಣುವ ಅದೆಷ್ಟೋ ಅಭಿಮಾನಿಗಳಿದ್ದಾರೆ. ಸುದೀಪ್ ಜೊತೆ ಸ್ಕ್ರೀನ್ ಶೇರ್ ಮಾಡೋದೇ ಒಂದು ಹೆಮ್ಮೆ. ಇಂತಹ ಅವಕಾಶವೊಂದು ಎದುರಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಿರ್ದೇಶಕ ಅನೂಪ್ ಭಂಡಾರಿ - ಸುದೀಪ್ ಸೇರಿ ಹೊಸ ಸಿನಿಮಾವೊಂದನ್ನು ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಚಿಕ್ಕ ಬಾಲಕಿ ಪಾತ್ರ ಮಾಡಲು 3-7 ವರ್ಷದ ಬಾಲಕಿಯ ಅಗತ್ಯವಿದೆ. ಬಾಲ ಕಲಾವಿದೆ ಬೇಕಾಗಿದ್ದಾರೆ. 

ಕಿಚ್ಚ ಸುದೀಪ್ ಸರ್ ಜೊತೆ ನಟಿಸಲು 3-7 ವರ್ಷದೊಳಗಿನ ಬಾಲಕಿಗೆ ಅವಕಾಶವಿದೆ. ಮುದ್ದಾಗಿ ನಟಿಸುವಂತಿರಬೇಕು ಎಂದು ಅನೂಪ್ ಭಂಡಾರಿ ಟ್ವೀಟ್ ಮಾಡಿದ್ದಾರೆ. ಆಸಕ್ತರು ಅನೂಪ್ ಭಂಡಾರಿ ಜೀಮೇಲ್ ಗೆ ರೆಸ್ಯೂಮೆಯನ್ನು ಮೇಲ್ ಮಾಡಬಹುದಾಗಿದೆ.

Scroll to load tweet…