ಮಾರ್ಚ್ ಮೊದಲ ವಾರದಲ್ಲಿ ಆ ಚಿತ್ರ ತೆರೆಗೆ ಬರಲಿದೆ. ಅಂಜನಾ ಗೌಡ ಮಾಡೆಲ್ ಆಗಿದ್ದವರು. ಕೂಡ ಹೌದು. ಸಿನಿಮಾಕ್ಕೆ ಬರುವ ಮುನ್ನ ‘ಮಿಸ್ ಮಲ್ನಾಡ್’, ‘ಮಿಸ್ ಕಾಮೆಟ್’ ಕಿರೀಟ ಧರಿಸಿದ್ದಾರೆ. ನೃತ್ಯಗಾತಿಯೂ ಹೌದು. 

‘ಸಣ್ಣವಳಿದ್ದಾಗ ನನಗಿದ್ದ ಕನಸುಗಳು ಮೂರು. ಆ್ಯಕ್ಟರ್ ಆಗ್ಬೇಕು, ಡಾನ್ಸರ್ ಆಗ್ಬೇಕು ಎನ್ನುವುದರ ಜತೆಗೆ ಗಗನ ಸಖಿ ಆಗ್ಬೇಕು ಅಂತಲೂ ಇತ್ತು. ಕಾಲೇಜು ಮುಗಿಸಿದ್ದೆ ತಡ, ಕನಸು ನನಸಾಗಿಸಿಕೊಳ್ಳುವತ್ತ ಹೊರಟೆ. ಈಗ ಆ ಮೂರು ಕನಸುಗಳೂ ನನಸಾಗಿವೆ. ಖುಷಿ ಆಗುತ್ತಿದೆ ’ ಅಂತ ಮುದ್ದು ಮುಖದ ಮೇಲೆ ನಗು ಅರಳಿಸಿ ಮಾತು ಶುರು ಮಾಡುತ್ತಾರೆ ನಟಿ ಅಂಜನಾ ಗೌಡ. 

‘ನಾನು ಹುಟ್ಟಿದ್ದು, ಬೆಳೆದಿದ್ದು, ಓದಿದ್ದು ಎಲ್ಲವೂ ಚಿಕ್ಕಮಗಳೂರು. ಅಮ್ಮ ಟೀಚರ್. ಹಾಗಾಗಿ ಮಗಳು ಹೆಚ್ಚು ಓದ್ಬೇಕು ಅನ್ನೋದು ಅಮ್ಮನ ಆಸೆ. ಅಂತೆಯೇ ಬಿಕಾಂ ಮುಗಿಸಿದೆ. ಅಲ್ಲಿಂದ ಡಾನ್ಸರ್ ಆಗ್ಬೇಕು ಅಂತ ಬೆಂಗಳೂರಿಗೆ ಬಂದೆ. ‘ದಿ ಸ್ಟ್ರೇಂಜರ್’ ಸಂಸ್ಥೆಗೆ ಸೇರಿ, ಅಂದುಕೊಂಡಂತೆ ಡಾನ್ಸರ್ ಕೂಡ ಆದೆ. ಕನ್ನಡ ಚಿತ್ರರಂಗದ ಹೆಸರಾಂತ ನೃತೃ ನಿರ್ದೇಶಕರಾದ ಮದನ್-ಹರಿಣಿ ಮಾಸ್ಟರ್ ಹತ್ತಿರ ಅಸಿಸ್ಟೆಂಟ್ ಆಗಿ ಸೇರಿಕೊಂಡೆ. ಅವರ ಕಡೆಯಿಂದಲೇ ನನಗೆ ನಟಿ ಆಗುವ
ಅವಕಾಶವೂ ಬಂತು ’ಎನ್ನುವುದರ ಮೂಲಕ ‘ಅನಿಸುತಿದೆ...’ ಚಿತ್ರದೊಂದಿಗೆ ಶುರುವಾದ ಸಿನಿಪಯಣದ ಕತೆ ಹೇಳುತ್ತಾರೆ ಚಿಕ್ಕಮಗಳೂರಿನ ಚಿಕ್ಕಮಲ್ಲಿಗೆ. ಅರ್ಜುನ್ ವಿರಾಟ್ ನಿರ್ದೇಶನ ಹಾಗೂ ಅಭಿನಯದ ಅನಿಸುತಿದೆ ಚಿತ್ರ ಅಂಜನಾ ಅವರ ಮೊದಲ ಚಿತ್ರ. ಮಾರ್ಡನ್ ಹುಡುಗಿ ಪಾತ್ರ.