ಬೆಂಗಳೂರು (ಫೆ. 17): ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ನೆರವಿನ ಮಹಾಪೂರವೇ ಹರಿದು ಬಂದಿದೆ. ಯೋಧರ ಕುಟುಂಬಗಳಿಗೆ ನೆರವು ನೀಡಲು ಸಾಕಷ್ಟು ಮಂದಿ ಮುಂದೆ ಬಂದಿದ್ದಾರೆ. 

ಹುತಾತ್ಮ ಯೋಧರ ಕುಟುಂಬಕ್ಕೆ ಅಮಿತಾಭ್ ನೆರವು

ನಿನ್ನೆ ಬಿಡುಗಡೆಯಾದ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರತಂಡ ಮಂಡ್ಯದ ಹುತಾತ್ಮ ಯೋಧ ಗುರು ಕುಟುಂಬಕ್ಕೆ ನೆರವು ನೀಡಲು ಮುಂದಾಗಿದೆ. ಭಾನುವಾರದ ಶೋನಲ್ಲಿ ಕರ್ನಾಟಕದಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ಗಳಿಕೆಯಾದ ಸಂಪೂರ್ಣ ಹಣವನ್ನು ಗುರು ಕುಟುಂಬಕ್ಕೆ ನೀಡಲು ಚಿತ್ರತಂಡ ನಿರ್ಧರಿಸಿದೆ.  ಬುಧವಾರ ಚೆಕ್ಕನ್ನು ಗುರು ಕುಟುಂಬಕ್ಕೆ ಹಸ್ತಾಂತರಿಸಲಿದೆ.

ಮಲೇಷ್ಯಾದಿಂದಲೇ ಹುತಾತ್ಮ ಗುರು ಕುಟುಂಬಕ್ಕೆ ಜಮೀನು ನೆರವು ಘೋಷಿಸಿದ ಸುಮಲತಾ ಅಂಬರೀಶ್ 

ನಟಿ ಸುಮಲತಾ ಅಂಬರೀಶ್ ಸಹ ಯೋಧ ಗುರು ಕುಟುಂಬಕ್ಕೆ ನೆರವಾಗಿದ್ದಾರೆ. ಅಂಬರೀಶ್ ಹುಟ್ಟೂರು ದೊಡ್ಡರಸಿನಕೆರೆ ಗ್ರಾಮದಲ್ಲಿರುವ ಅರ್ಧ ಎಕರೆ ಜಮೀನನ್ನು ನೀಡಿದ್ದಾರೆ. ಇದೇ ರೀತಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ 5 ಲಕ್ಷ ರೂ ನೆರವನ್ನು ನೀಡಿದ್ದಾರೆ.