ಜಮ್ಮು ಕಾಶ್ಮೀರ (ಫೆ. 17): ಪುಲ್ವಾಮಾದಲ್ಲಿ ಮಡಿದ 40 ಯೋಧರ ಕುಟುಂಬಗಳಿಗೆ ರಾಜಕೀಯ, ಧಾರ್ಮಿಕ, ಸಿನಿಮಾ, ಕ್ರೀಡಾ ವಲಯದಿಂದ ಮಾನವೀಯತೆಯ ನೆರವಿನ ಮಹಾಪೂರವೇ ಹರಿದುಬಂದಿದೆ.

ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಹುತಾತ್ಮ ಯೋಧರ ಕುಟುಂಬಕ್ಕೆ ನೆರವು ನೀಡುವುದಾಗಿ ಘೋಷಿಸಿದ್ದಾರೆ. 

ಪರಿಹಾರ ನೀಡಿಕೆ ವಿಷಯ ತಿಳಿಸಿದ ಬಾಲಿವುಡ್‌ ಮೆಗಾಸ್ಟಾರ್‌ ಅಮಿತಾಭ್‌ ಬಚ್ಚನ್‌ ಅವರ ವಕ್ತಾರರು, ‘ಹುತಾತ್ಮರ ಕುಟುಂಬಕ್ಕೆ 5 ಲಕ್ಷ ರು. ಘೋಷಣೆ ಮಾಡಲಾಗಿದೆ. ಸರ್ಕಾರದ ಮೂಲಕ ನೀಡಬೇಕೆ ಎಂಬುದರ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ,’ ಎಂದರು.

ಪುಲ್ವಾಮಾದಲ್ಲಿ ಉಗ್ರರ ಅಟ್ಟಹಾಸದಲ್ಲಿ ಬಲಿಯಾದ ಎಲ್ಲ 40 ಸಿಆರ್‌ಪಿಎಫ್‌ ಯೋಧರ ಕುಟುಂಬಕ್ಕೆ ತಲಾ 5 ಲಕ್ಷ ರು. ಪರಿಹಾರ ನೀಡುವುದಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ.