Asianet Suvarna News Asianet Suvarna News

ಸಾರ್ವಜನಿಕರಿಂದ 'ಬಾಹುಬಲಿ-2' ಲಕ್ಷಾಂತರ ಲೂಟಿ: ನಗರದಲ್ಲಿ ಇಂದೇ ಬಿಡುಗಡೆ !

ಬಾಹುಬಲಿ-2 ಹೆಸರಿನಲ್ಲಿ ಹಣ ಕೊಳ್ಳೆ ಹೊಡೆದ ಚಿತ್ರಮಂದಿರದ ಮಾಲೀಕರು ರೂ.500 ರಿಂದ 1500  ರೂ.ಗಳ ವರೆಗೂ ಮುಂಗಡ ಕಾಯ್ದಿರಿಸಿಕೊಂಡಿದ್ದಾರೆ.

Cheating from Distributors and theater owners
  • Facebook
  • Twitter
  • Whatsapp

ಬೆಂಗಳೂರು(ಏ.27): ಸರ್ಕಾರದ ಆದೇಶ ಧಿಕ್ಕರಿಸಿಬಾಹುಬಲಿ-2 ಸಿನಿಮಾವನ್ನು 3 ದಿನಗಳ ಮುಂಚಿತವಾಗಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಹಣದ ಮೂಲಕ ಮುಂಗಡ ಬುಕ್ಕಿಂಗ್ ಮಾಡಿಕೊಂಡ ಚಿತ್ರಮಂದಿರದ ಮಾಲೀಕರು,ಹಂಚಿಕೆದಾರರು ಸಾರ್ವಜನಿಕರಿಂದ ಲಕ್ಷಾಂತರ ಲೂಟಿ ಮಾಡಿದ್ದಾರೆ.

ಬಾಹುಬಲಿ-2 ಹೆಸರಿನಲ್ಲಿ ಹಣ ಕೊಳ್ಳೆ ಹೊಡೆದ ಚಿತ್ರಮಂದಿರದ ಮಾಲೀಕರು ರೂ.500 ರಿಂದ 1500  ರೂ.ಗಳ ವರೆಗೂ ಮುಂಗಡ ಕಾಯ್ದಿರಿಸಿಕೊಂಡಿದ್ದಾರೆ. ಸಾಮಾನ್ಯ ಚಿತ್ರಮಂದಿರಗಳಲ್ಲಿ ಪ್ರತಿ ಟಿಕೆಟ್​ಗೆ 500 ರೂ.ಗಳಿದ್ದರೆ ಮಲ್ಟಿಫ್ಲೆಕ್ಸ್'ಗಳಲ್ಲಿ 1500 ರೂ.ಗಳ ವರೆಗೂ ಹಣವನ್ನು ಕೊಳ್ಳೆ ಹೊಡೆದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ 200 ರೂ. ದರ ಜಾರಿಗೆ ಕಡತಕ್ಕೆ 3 ದಿನದ ಹಿಂದೆಯೇ ಸಹಿ ಹಾಕಿದ್ದರೂ ಅಧಿಕೃತ ಆದೇಶ ಹೊರಬಿದ್ದಿಲ್ಲ.ಇದನ್ನೇ ಬಳಸಿಕೊಂಡ ಬಾಹುಬಲಿ-2 ವಿತರಕರು, ಹಂಚಿಕೆದಾರರು ಹಾಗೂ ಥಿಯೇಟರ್ ಮಾಲೀಕ ಹಗಲು ದರೋಡೆ ಮಾಡಿದ್ದಾರೆ. ಸರ್ಕಾರಕ್ಕೆ ಮಾತ್ರ ಬಾಹುಬಲಿ-2ಗೆ ಮೂಗುದಾರ ಹಾಕಲು ಸಾಧ್ಯವಾಗಲಿಲ್ಲ.

ಬೆಂಗಳೂರಿನಲ್ಲಿ ಇಂದೇ ಬಿಡುಗಡೆ

ನಿಗದಿಪಡಿಸಿದ ದಿನಾಂಕದಂತೆ ದೇಶಾದ್ಯಂತ ನಾಳೆ (ಏ.28) ಬಿಡುಗಡೆಯಾಗಬೇಕಿದ್ದ ಬಾಹುಬಲಿ-2 ಒಂದು ದಿನ ಮುಂಚಿತವಾಗಿಯೇ ಇಂದಿನಿಂದಲೇ ಬೆಂಗಳೂರಿನ ಪ್ರತಿಷ್ಠಿತ ಥಿಯೇಟರ್​ಗಳಲ್ಲಿ ಇಂದು ರಾತ್ರಿ 10ಗಂಟೆಗೆ ಬಿಡುಗಡೆಯಾಗುತ್ತಿದೆ.

Follow Us:
Download App:
  • android
  • ios