ಬೆಂಗಳೂರು (ಫೆ.15): ಪಾಕಿಸ್ತಾನಿ ಪ್ರೇರಿತ ಕಾಶ್ಮೀರಿ ಉಗ್ರನ ಆತ್ಮಾಹುತಿ ದಾಳಿಗೆ ಭಾರತೀಯ ಸೇನೆ ಯ 44 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ. 

ಪಾಪಿ ಉಗ್ರರನ್ನು ಸದೆಬಡಿಯಲು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ: ಮೋದಿ

ಎರಡು ದಶಕಗಳಲ್ಲಿ ನಡೆದ ಅತೀ ದೊಡ್ಡ ಉಗ್ರ ದಾಳಿ ಇದಾಗಿದೆ. ನಮ್ಮ ಯೋಧರ ಸಾವಿಗೆ ಇಡೀ ದೇಶವೇ ಮರುಗಿದೆ. ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ನಮ್ಮ ಸೈನಿಕರ ಹನಿ ಹನಿ ರಕ್ತಕ್ಕೂ ಪ್ರತಿಕಾರ ತೆಗೆದುಕೊಳ್ಳುವೆವು ಎಂದು ಕೇಂದ್ರ ಸರ್ಕಾರ ಘೋಷಿಸಿದೆ. 

ಭಾರತದ ಬೆಂಬಲಕ್ಕೆ ಬಂತು ಜಗತ್ತು: ಪಾಕ್‌ಗೆ ಕಾದಿದೆ ಆಪತ್ತು!

ಯೋಧರ ಸಾವಿಗೆ ಸಂತಾಪಗಳ ಸುರಿಮಳೆಯೇ ಹರಿದಿದೆ. ನಟ ದರ್ಶನ್ ಕೂಡಾ ನಮನ ಸಲ್ಲಿಸಿದ್ದಾರೆ. ಪುಲ್ವಾಮಾ ದಾಳಿ ಬಗ್ಗೆ ಕೇಳಿ ತುಂಬಾ ದುಃಖವಾಗಿದೆ. ಮಡಿದ ಯೋಧರ ಹಾಗೂ ಅವರ ಕುಟುಂಬಕ್ಕಾಗಿ ಪ್ರಾರ್ಥಿಸುತ್ತೇನೆ. ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ. ಭಯೋತ್ಪಾದನೆ ಮಾನವ ಸಮಾಜಕ್ಕೆ ಕಂಟಕಪ್ರಾಯವಾಗಿದೆ. ಭಯೋತ್ಪಾದನೆ ಸಂಪೂರ್ಣವಾಗಿ ತೊಲಗಬೇಕು ಎಂದಿದ್ದಾರೆ.