ಬೆಂಗಳೂರು (ಡಿ. 18): ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚಿಗೆ ಸಿನಿಮಾಕ್ಕಿಂತ ಹೆಚ್ಚಾಗಿ ಸಾಮಾಜಿಕ ಕಾರ್ಯಗಳಿಂದಲೇ ಹೆಚ್ಚು ಹೆಸರು ಮಾಡುತ್ತಿದ್ದಾರೆ. ಬೆಟ್ಟ, ಗುಡ್ಡ, ಪ್ರಾಣಿಗಳೆಂದು ಕ್ಯಾಮೆರಾ ಹಿಡಿದು ಕಾಡುಮೇಡು ಸುತ್ತುತ್ತಿರುತ್ತಾರೆ.  ರಾಜ್ಯ ಅರಣ್ಯ ಇಲಾಖೆಯ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸಹಾಯ ಹಸ್ತ ಚಾಚಿ ಮಾನವೀಯತೆ ಮೆರೆದ ದರ್ಶನ್ 

ಪ್ರಾಣಿಗಳೆಂದರೆ ಇವರಿಗೆ ಅಪಾರ ಪ್ರೀತಿ. ಇತ್ತೀಚಿಗೆ ಮೈಸೂರು ಮೃಗಾಲಯದಿಂದ ಹುಲಿ, ಆನೆಯನ್ನು ದತ್ತು ಪಡೆದಿದ್ದಾರೆ. ಜೊತೆಗೆ ಸ್ನೇಹಿತರಿಗೂ ತೆಗೆದುಕೊಳ್ಳುವಂತೆ ಪ್ರೇರೇಪಿಸಿದ್ದಾರೆ. ಇವರ ಪರಿಸರ ಪ್ರೀತಿ ಇಷ್ಟಕ್ಕೇ ಸೀಮಿತಾಗಿಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಾಡನ್ನೇ ದತ್ತು ಪಡೆದಿದ್ದಾರೆ. ಮಲೆ ಮಹದೇಶ್ವರ ಬೆಟ್ಟವನ್ನು ದತ್ತು ಪಡೆದು ಅಭಿವೃದ್ಧಿಪಡಿಸಲು ಮನಸ್ಸು ಮಾಡಿದ್ದಾರೆ. 

ದರ್ಶನ್ ಅಸಲಿ ಮುಖ ತಿಳಿಯಬೇಕಾದರೆ ಈ ವಿಡಿಯೋ ನೋಡಲೇಬೇಕು!

ಚಾಲೆಂಜಿಂಗ್ ಸ್ಟಾರ್ ಈಗೀಗ ಹೆಚ್ಚಿನ ಸಮಯವನ್ನು ಕಾಡು, ಬೆಟ್ಟಗಳಲ್ಲೇ ಕಳೆಯುತ್ತಿದ್ದಾರೆ. ಅರಣ್ಯ ಇಲಾಖೆಯ ರಾಯಭಾರಿಯಾಗಿ ತಮ್ಮ ಕರ್ತವ್ಯವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಿದ್ದಾರೆ. ಹಾಗಂತ ಶೂಟಿಂಗ್ ಗೂ ತಪ್ಪಿಸಿಕೊಳ್ಳುತ್ತಿಲ್ಲ. ದರ್ಶನ್ ಸಾಮಾಜಿಕ ಕಾರ್ಯಕ್ಕೆ ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಗಿದೆ.