ಬೆಂಗಳೂರು (ಜ. 15): ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಮಕರ ಸಂಕ್ರಾಂತಿ ಗಿಫ್ಟ್ ನೀಡಿದ್ದಾರೆ. ಬಹುನಿರೀಕ್ಷಿತ ಯಜಮಾನ ಚಿತ್ರದ ಮೊದಲ ಹಾಡು ರಿಲೀಸಾಗಿದೆ. ಶಿವನಂದಿ ಹಾಡು ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿ 2 ಗಂಟೆಗೆ 4 ಲಕ್ಷ ಮಂದಿ ವೀಕ್ಷಿಸಿದ್ದಾರೆ.

ದರ್ಶನ್ ಮೊದಲ ಚಿತ್ರ ಕುರುಕ್ಷೇತ್ರನಾ? ಯಜಮಾನನಾ?

ಯಜಮಾನ ಚಿತ್ರದ ಮೊದಲ ಹಾಡು ಕೇಳಿ ಅಭಿಮಾನಿಗಳು ಸಖತ್ ಥ್ರಿಲ್ಲಾಗಿದ್ದಾರೆ. ನಡೆದರೆ ತೇರು, ವೈಭವ ಜೋರು, ತಡೆಯೋರು ಯಾರು ಎನ್ನುವ ಸಾಲುಗಳಿಗೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ದರ್ಶನ್ ಗೆ ಹೇಳಿ ಮಾಡಿಸಿದಂತಿದೆ ಈ ಹಾಡು. 

ಯಜಮಾನ ಫಸ್ಟ್‌ಲುಕ್ ರಿಲೀಸ್!

ಈ ಹಾಡಿಗೆ ವ ಹರಿಕೃಷ್ಣ ಸಂಗೀತವಿದ್ದು, ಬಹದ್ದೂರು ಚೇತನ್ ಸಾಹಿತ್ಯ ಬರೆದಿದ್ದಾರೆ. ಕಾಲ ಭೈರವ, ಸಂತೋಷ್ ವೆಂಕಿ, ಶಶಾಂಕ್ ಶೇಷಗಿರಿ, ಚೇತನ್ ವಿಕಾಸ್ ಹಾಡಿಗೆ ದನಿ ನೀಡಿದ್ದಾರೆ. ರಶ್ಮಿಕಾ ಮಂದಣ್ಣ ಹಾಗೂ ತಾನ್ಯಾ ಹೋಪ್ ಸಾರಥಿಗೆ ಸಾಥ್ ನೀಡಿದ್ದಾರೆ.