ಶಿವಣ್ಣ, ಸುದೀಪ್, ಗಣೇಶ್, ಪುನೀತ್, ರಮೇಶ್, ಜಗ್ಗೇಶ್ - ಹೀಗೆ ಕನ್ನಡದ ಬಹುತೇಕ ಸ್ಟಾರುಗಳು ರಿಯಾಲಿಟಿ ಷೋಗಳಲ್ಲಿ ಕಾಣಿಸಿಕೊಂಡವರೇ. ಆದರೆ, ರಿಯಾಲಿಟಿ ಷೋ ಬೇಡ ಅಂದ ಕೂತವರು ದರ್ಶನ್ ಮತ್ತು ಯಶ್ ಇಬ್ಬರೇ.

ದರ್ಶನ್ ರಿಯಾಲಿಟಿ ಶೋ ನಡೆಸಿಕೊಡುತ್ತಾರೆ ಅನ್ನುವ ಸುದ್ದಿ ಆಗಾಗ ಚಾಲ್ತಿಗೆ ಬರುತ್ತಿರುತ್ತದೆ. ಅದನ್ನು ದರ್ಶನ್ ನಿರಾಕರಿಸುತ್ತಲೂ ಇರುತ್ತಾರೆ. ಈ ವಾರ ಮತ್ತೊಮ್ಮೆ ದರ್ಶನ್ ರಿಯಾಲಿಟಿ ಷೋ ನಿರೂಪಕರಾಗಿ ಸುದ್ದಿಯಲ್ಲಿದ್ದರು. ಅವರಿಗೆ ಒಂದು ಚಾನಲ್ಲು 12 ಕೋಟಿ ರುಪಾಯಿಗಳನ್ನು ಕೊಟ್ಟು ಅವರನ್ನು ರಿಯಾಲಿಟಿ ಷೋ ಮಾಡುವುದಕ್ಕೆ ಒಪ್ಪಿಸಿದೆ ಎಂದು ಸಾಮಾಜಿಕ ಜಾಲತಾಣದಲ್ಲೆಲ್ಲ ಸುದ್ದಿಯಾಗಿತ್ತು.

ದರ್ಶನ್ ಈ ಸುದ್ದಿಯನ್ನು ನಿರಾಕರಿಸಿದ್ದಾರೆ. ಅವರು ಯಾವತ್ತೂ ರಿಯಾಲಿಟಿ ಷೋಗಳಲ್ಲಿ ಭಾಗವಹಿಸುವುದಿಲ್ಲ ಎಂದೇ ಹೇಳಿಕೊಂಡು ಬಂದಿದ್ದರು. ಈಗ ಬಂದಿರುವ ಸುದ್ದಿಯ ಬಗ್ಗೆಯೂ ಅವರದು ಅದೇ ಪ್ರತಿಕ್ರಿಯೆ.

ನಾನು ಯಾವತ್ತೂ ರಿಯಾಲಿಟಿ ಷೋ ಇಷ್ಟಪಟ್ಟವನಲ್ಲ. ನನಗೆ ಅದು ಹೊಂದಾಣಿಕೆ ಆಗುವುದೂ ಇಲ್ಲ. ಆಗಾಗ ನಾನು ರಿಯಾಲಿಟಿ ಷೋಗಳಲ್ಲಿ ನಟಿಸುತ್ತೇನೆ ಎಂಬ ಸುದ್ದಿಗಳು ಬರುತ್ತಾ ಇರುತ್ತವೆ. ಅವುಗಳನ್ನು ನಂಬುವುದಕ್ಕೆ ಹೋಗಬೇಡಿ ಎನ್ನುವುದು ದರ್ಶನ್ ಯಾವತ್ತೂ ಆಡುವ ಸ್ಪಷ್ಟನುಡಿ.

ಶಿವಣ್ಣ, ಸುದೀಪ್, ಗಣೇಶ್, ಪುನೀತ್, ರಮೇಶ್, ಜಗ್ಗೇಶ್ - ಹೀಗೆ ಕನ್ನಡದ ಬಹುತೇಕ ಸ್ಟಾರುಗಳು ರಿಯಾಲಿಟಿ ಷೋಗಳಲ್ಲಿ ಕಾಣಿಸಿಕೊಂಡವರೇ. ಆದರೆ, ರಿಯಾಲಿಟಿ ಷೋ ಬೇಡ ಅಂದ ಕೂತವರು ದರ್ಶನ್ ಮತ್ತು ಯಶ್ ಇಬ್ಬರೇ.

ಕನ್ನಡಪ್ರಭ ಸಿನಿ ವಾರ್ತೆ
epaper.kannadaprabha.in