ರೆಬೆಲ್ ಸ್ಟಾರ್ ಅಂಬರೀಷ್ ಅವರಿಗೆ ಸ್ಯಾಂಡಲ್‌ವುಡ್ ಸೂಪರ್ ಸ್ಟಾರ್‌ಗಳಾದ ದರ್ಶನ್ ಹಾಗೂ ಸುದೀಪ್‌ ಅವರ ಮನಸ್ತಾಪವನ್ನು ಸರಿ ಮಾಡಬೇಕೆಂಬ ಆಸೆಯಿತ್ತು. ಅಲ್ಲದೇ ಮೈಸೂರು ಭಾಗದಿಂದ ಬಂದ ರಾಕಿಂಗ್ ಹೀರೋ ಯಶ್ ಹಾಗೂ ಮಾಸ್ ಹೀರೋ ದರ್ಶನ್ ಅವರ ಸಂಬಂಧವೂ ಸುಧಾರಿಸಲು ಯತ್ನಿಸಿದ್ದರು.

ಅಂಬಿ ನಿಧನವಾದಾಗ ಮೊದಲಿನಿಂದ ಕಡೇವರೆಗೂ ಯಶ್ ಸಾಥ್ ನೀಡಿದರೆ, ನಂತರ ದರ್ಶನ್ ಸಾಥ್ ನೀಡದ್ದರು. ಆದರೆ, ಎಲ್ಲಿಯೂ ದರ್ಶನ್-ಯಶ್ ಆಗಲಿ, ಸುದೀಪ್-ದರ್ಶನ್ ಆಗಲಿ ಒಟ್ಟೊಟ್ಟಿಗೆ ಕಾಣಿಸಿ ಕೊಳ್ಳಲೇ ಇಲ್ಲ.

ಕೆಜಿಎಫ್ ಸಿನಿಮಾದ 6 ಸೀಕ್ರೇಟ್’ಗಳು ಇಲ್ಲಿವೆ ನೋಡಿ

ದರ್ಶನ್ ಅಭಿಮಾನಿಗಳ ಕಾರ್ಯಕ್ಕೆ ಭೇಷ್ ಎನ್ನಿ...! ಆದರೆ, ಕನ್ನಡ ಚಿತ್ರಾಭಿಮಾನಿಗಳಿಗೆ ತುಸು ನೆಮ್ಮದಿ ನೀಡುವಂತೆ ದರ್ಶನ್ ಅಭಿಮಾನಿಗಳು ನಡೆದುಕೊಂಡಿದ್ದಾರೆ. ಯಶ್ ಅಭಿನಯನದ, ಬಹು ನಿರೀಕ್ಷಿತ ಕೆಜಿಎಫ್ ರಿಲೀಸ್ ಆದ ಬೆನ್ನಲ್ಲೇ, ದರ್ಶನ್ ಅಭಿಮಾನಿಗಳು ಬ್ಯಾನರ್ ಹಾಕಿ ರಾಕಿಂಗ್ ಸ್ಟಾರ್ ಚಿತ್ರಕ್ಕೆ ಶುಭ ಕೋರಿದ್ದಾರೆ. ಯಶ್ ಹಾಗೂ ದರ್ಶನ್ ಫೋಟೋ ಹಾಕಿ ಮೈಸೂರಿನಲ್ಲಿ ಗೆಳೆಯರ ಬಳಗ ಕೆಜಿಎಫ್‌ಗೆ ಶುಭ ಕೋರಿರುವುದು ಅತ್ಯುತ್ತಮ ನಡೆ ಎಂದು ಎಲ್ಲೆಡೆಯಿಂದ ಶ್ಲಾಘಿಸಲಾಗುತ್ತಿದೆ.

ಹಲವು ಅಡೆ ತೆಡೆಗಳನ್ನು ದಾಟಿ, ಕೆಜಿಎಫ್ ವಿಶ್ವಾದ್ಯಂತ ಬಿಡುಗಡೆಯಾಗಿದೆ. ರಾಕಿಂಗ್ ಸ್ಟಾರ್ ಅಭಿನಯನಕ್ಕೆ ಬೋಲ್ಡ್ ಆದ ಫ್ಯಾನ್ಸ್‌ ಎಲ್ಲೆಡೆ ದೊಡ್ಡ ದೊಡ್ಡ ಕಟೌಟ್ ಹಾಕಿ ಪ್ರೀತಿ ತೋರಿಸಿದ್ದಾರೆ. ಅಷ್ಟೇ ಏಕೆ ಹೆಲಿಕಾಫ್ಟರ್ ಮೂಲಕ ಪುಷ್ಪಾಭಿಷೇಕ ಮಾಡಿ, ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದ್ದಾರೆ. ಇದಕ್ಕೆ ದರ್ಶನ್ ಅಭಿಮಾನಿಗಳು ಸಾಥ್ ನೀಡುತ್ತಿರುವುದು ವಿಶೇಷ.

ಇನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ ಯಶ್ ಅಭಿಮಾನಿಗಳು ಹಲವಾರು ಫ್ಯಾನ್ ಪೇಜ್ ತೆಗೆದಿದ್ದಾರೆ. ತಮ್ಮ ಸಂಭ್ರಮದ ಕ್ಷಣಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಚಿತ್ರಮಂದಿರ ರಸ್ತೆಗಳಲ್ಲಿ ದೊಡ್ಡ ಕಟೌ‌ಟ್‌ಗಳಿದ್ದು, ಭಾರೀ ಸದ್ದು ಮಾಡುತ್ತಿದೆ.

ರಾಕಿಭಾಯ್ ಕಟೌಟ್‌ಗೆ ಹೆಲಿಕಾಪ್ಟರ್‌ನಿಂದ ಪುಷ್ಪಾಭಿಷೇಕ!

ಸದಾ ಅಭಿಮಾನಿಗಳ ಮೂಲಕ ಈ ಇಬ್ಬರು ಕನ್ನಡದ ಸೂಪರ್ ನಟರು ಕಿತ್ತಾಡಿಕೊಳ್ಳುವಂತೆ ಆಗುತ್ತಿತ್ತು. ಈ ಅಭಿಮಾನಿಗಳೇ ಇದೀಗ ಒಂದಾಗಿದ್ದು, ಇನ್ನಾದರೂ ಈ ಇಬ್ಬರ ಸಂಬಂಧ ಮತ್ತಷ್ಟು ಸುಧಾರಿಸಲಿ ಎಂಬುವುದು ಕನ್ನಡ ಚಿತ್ರರಂಗದ ಆಶಯ.