ಶಶಿಕುಮಾರ್‌ ಪುತ್ರನ ಸಿನಿಮಾ ಎಂಟ್ರಿಗೆ ದರ್ಶನ್‌ ಸಾಥ್‌ | ಸೆ.2 ರಂದು ಮುಹೂರ್ತ, ಅಕ್ಟೋಬರ್‌ಗೆ ಚಿತ್ರೀಕರಣ ಶುರು |  ಈ ಚಿತ್ರಕ್ಕೆ ಸಿದ್ದಾರ್ಥ್ ಮಾರದೆಪ್ಪ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ 

ಬೆಂಗಳೂರು (ಆ. 29): ಹಿರಿಯ ನಟ ಶಶಿಕುಮಾರ್‌ ಪುತ್ರ ಆದಿತ್ಯ ಶಶಿಕುಮಾರ ಬೆಳ್ಳಿತೆರೆ ಪ್ರವೇಶಕ್ಕೆ ವೇದಿಕೆ ಸಜ್ಜಾಗಿದೆ. ಸೆಪ್ಟೆಂಬರ್‌ 2 ರಂದು ಆದಿತ್ಯ ಶಶಿಕುಮಾರ ಅಭಿನಯದ ಮೊದಲ ಚಿತ್ರ ‘ಮೊಡವೆ’ಗೆ ಮುಹೂರ್ತ ಫಿಕ್ಸ್‌ ಆಗಿದೆ.

ದರ್ಶನ್‌ ಮುಖ್ಯ ಅತಿಥಿ ಆಗಿ ಬರುತ್ತಿದ್ದಾರೆ. ಈ ಚಿತ್ರದಲ್ಲಿ ಆದಿತ್ಯ ಶಶಿ ಕುಮಾರ್‌ ಅವರಿಗೆ ಜೋಡಿಯಾಗಿ ಅಪೂರ್ವ ಕಾಣಿಸಿಕೊಂಡಿದ್ದಾರೆ. ಬ್ರೌನ್‌ ಬುಲ್‌ ಸ್ಟುಡಿಯೋಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಸಿದ್ದಾಥ್‌ರ್‍ ಮಾರದೆಪ್ಪ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.

‘ಅಪೂರ್ವ’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಕಾಲಿಟ್ಟಈ ಚೆಲುವೆ ಈಗ ‘ವಿಕ್ಟರಿ 2’ ಚಿತ್ರಕ್ಕೆ ನಾಯಕಿ. ಅಲ್ಲಿಂದೀಗ ‘ಮೊಡವೆ’ ಸರದಿ. ಟೈಟಲ್‌ಗೆ ತಕ್ಕಂತೆ ಇದು ಟಿನೇಜ್‌ ಹುಡುಗ-ಹುಡುಗಿಯ ಕತೆ. ಈಗಾಗಲೇ ಸಿನಿಮಾದ ಫಸ್ಟ್‌ ಲುಕ್‌ ಕೂಡ ಬಿಡುಗಡೆ ಆಗಿದೆ. ಎತ್ತಿನ ಗಾಡಿ ಎಳೆಯುತ್ತಿರುವ ಲುಕ್‌ನಲ್ಲಿ ಈ ಜೋಡಿ ಕಾಣಿಸಿಕೊಂಡಿದೆ. ಪಕ್ಕಾ ಗ್ರಾಮೀಣ ಹಿನ್ನೆಲೆಯಲ್ಲಿ ಈ ಕತೆ ಸಾಗುತ್ತೆ ಎನ್ನುವುದಕ್ಕೆ ಈ ಲುಕ್‌ ಸಾಕ್ಷಿ ಆಗಿದೆ. ಚಿತ್ರ ತಂಡ ಅಕ್ಟೋಬರ್‌ ಮೊದಲ ವಾರ ಶೂಟಿಂಗ್‌ ಶುರು ಮಾಡಲಿದೆಯಂತೆ.