ಈ ಜಂಗುಳಿಯ ಕಡೆಗೆ ಶಾರುಖ್‌ ಏನೋ ಎಸೆದಾಗ ಅದನ್ನು ಪಡೆಯಲು ನೂಕುನುಗ್ಗಲಾಗಿ, ಜನರು ತಮ್ಮ ತಳ್ಳುವ ಗಾಡಿಗೆ ಧಕ್ಕೆ ಮಾಡಿ ದರು.

ಕೋಟಾ (ರಾಜಸ್ಥಾನ): ರೈಲ್ವೆ ಆಸ್ತಿಪಾಸ್ತಿಗೆ ಧಕ್ಕೆ ಮಾಡಿದ ಆರೋಪದ ಮೇರೆಗೆ ನಟ ಶಾರುಖ್‌ ಖಾನ್‌ ವಿರುದ್ಧ ರೈಲ್ವೆ ಕೋರ್ಟ್‌ ಆದೇಶಾ ನುಸಾರ ಪ್ರಕರಣ ದಾಖಲಿಸಲಾಗಿದೆ. ‘ರಯೀಸ್‌' ಚಿತ್ರ ಪ್ರದರ್ಶನಕ್ಕೆ ಶಾರುಖ್‌ ಆಗಮಿಸಿದಾಗ ಅವರನ್ನು ನೋಡಲು ಜನಜಂಗುಳಿ ಸೇರಿತ್ತು. ಈ ಜಂ ಗುಳಿಯ ಕಡೆಗೆ ಶಾರುಖ್‌ ಏನೋ ಎಸೆದಾಗ ಅದನ್ನು ಪಡೆಯಲು ನೂಕುನುಗ್ಗಲಾಗಿ, ಜನರು ತಮ್ಮ ತಳ್ಳುವ ಗಾಡಿಗೆ ಧಕ್ಕೆ ಮಾಡಿ ದರು. ಇದರ ನಷ್ಟವನ್ನು ಭರಿಸಿಕೊಡಬೇಕು ಎಂದು ಪ್ಲಾಟ್‌ಫಾರಂ ವ್ಯಾಪಾರಿಯೊಬ್ಬರು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್‌ನಡಿ ಹಾಗೂ ರೈಲ್ವೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.