ತಮ್ಮ ಈ ಸಾಹಸವನ್ನ ಟ್ವಿಟರ್'ನಲ್ಲೂ ಬರೆದುಕೊಂಡು ತಮ್ಮ ಅಭಿಮಾನಿಗಳೂ ತಿಳಿಸಿದ್ದಾರೆ.

ಬುಲೆಟ್ ಪ್ರಕಾಶ್ ಕನ್ನಡದ ಹಾಸ್ಯ ಕಲಾವಿದ. ತಮ್ಮ ದೈತ್ಯ ದೇಹದಿಂದಲೇ ಖ್ಯಾತಿಗಳಿಸಿದ ನಟ. ಈಗ ದೇಹದ ತೂಕ ಇಳಿಸೋಕೆ ನಿರ್ಧರಿಸಿದ್ದಾರೆ. ಅದರ ಮೊದಲ ಪ್ರಯತ್ನವೆಂಬಂತೆ 35 ಕೆ.ಜಿ.ತೂಕ ಇಳಿಸಿದ್ದಾರೆ. ಅದರ ಫಲ ಬುಲೆಟ್ ಈಗ ಕೊಂಚ ಸಣ್ಣ ಕಾಣ್ತಿದ್ದಾರೆ. ರೆಡಿ ಟು ಫಿಟ್ ಅನ್ನೋ ಮಟ್ಟಕ್ಕೂ ಭರವಸೆ ಮೂಡಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಅನ್ನವನ್ನೂ ಮುಟ್ಟಿಲ್ಲ ಪ್ರಕಾಶ್. ಅಷ್ಟು ಕಟ್ಟುನಿಟ್ಟಾಗಿಯೆ ದೇಹವನ್ನ ಇಳಿಸಿಕೊಳ್ತಿದ್ದಾರೆ. ತಮ್ಮ ಈ ಸಾಹಸವನ್ನ ಟ್ವಿಟರ್'ನಲ್ಲೂ ಬರೆದುಕೊಂಡು ತಮ್ಮ ಅಭಿಮಾನಿಗಳೂ ತಿಳಿಸಿದ್ದಾರೆ. ಬನ್ನಿ, ಅವರ ಈ ಸಾಹಸದ ಬಗ್ಗೆ ಅವರನ್ನೇ ಕೇಳಿ ಬಿಡೋಣ.