ಸಾಹಸ ಸಿಂಹ ವಿಷ್ಣುವರ್ಧನ್ ಜನ್ಮದಿನದ ಅಂಗವಾಗಿ ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ ನಡೆಯಲಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ ಬರೆದಿರುವ ‘ಮಾತು, ಮೌನ,ಧ್ಯಾನ ವಿಷ್ಣುವರ್ಧನ’ ಪುಸ್ತಕ ಲೋಕಾಪರ್ಣೆಯಾಗಲಿದೆ.

ಬೆಂಗಳೂರು[ಸೆ.14] ಸಾಹಸ ಸಿಂಹ ಡಾ. ವಿಷ್ಣುವರ್ಧನ ರಾಷ್ಟ್ರೀಯ ಉತ್ಸವ 2018 ಸೆ. 16,17 ಮತ್ತು 18 ರಂದು ವಿವಿ ಪುರದ ಕುವೆಂಪು ಕಲಾಕ್ಷೇತ್ರದಲ್ಲಿ ನಡೆಯಲಿದೆ. ಇದೇ ಸಂದರ್ಭ ಜೋಗಿ ಅವರ ಪುಸ್ತಕವೂ ಲೋಕಾರ್ಪಣೆಯಾಗಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಾಹಸ ಸಿಂಹರ ಜೀವನದ ವಿವಿಧ ಆಯಾಮಗಳನ್ನು ಇಲ್ಲಿ ಕಾಣಬಹುದು. ಸುವರ್ಣ ನ್ಯೂಸ್.ಕಾಂ ಸಂಪಾದಕ ಎಸ್.ಕೆ.ಶಾಮ ಸುಂದರ್ ಪುಸ್ತಕಕ್ಕೆ ಬೆನ್ನುಡಿ ಬರೆದಿದ್ದಾರೆ. ಮೂರು ದಿನದ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ವಿಷ್ಣುವರ್ಧನ ಚಿತ್ರಗಳ ಗೀತೆ ಆಸ್ವಾದಿಸಬಹುದು.

ಡಾ. ವಿಷ್ಣುವರ್ಧನ ರಾಷ್ಟ್ರೀಯ ಉತ್ಸವ, ನೀವು ಬನ್ನಿ ನಿಮ್ಮವರನ್ನು ಕರೆತನ್ನಿ