ಬಾಲಿವುಡ್ ಎಂದೂ ಮರೆಯಲಾಗದ ನಟಿ, ಭೂ ಲೋಕದ ಅಪ್ಸರೆ ಶ್ರೀದೇವಿ ಜನಮಾನಸದಲ್ಲಿ ಯಾವತ್ತಿಗೂ ಉಳಿಯುವ ನಟಿ. ಆಕೆಯ ಸ್ಮರಣಾರ್ಥ ಸಿಂಗಾಪೂರ್ ನಲ್ಲಿ ಮೇಣದ ಪ್ರತಿಮೆಯೊಂದನ್ನು ನಿರ್ಮಿಸಲಾಗಿದೆ. 

ಪತಿ ಬೋನಿ ಕಪೂರ್, ಪುತ್ರಿಯರಾದ ಜಾಹ್ನವಿ,  ಹಾಗೂ ಖುಷಿ ಮೇಣದ ಪ್ರತಿಮೆಯನ್ನು ಇಂದು ಅನಾವರಣಗೊಳಿಸಿದರು. ಬೋನಿ ಕಪೂರ್ ಜೊತೆ ಸಹೋದರ ಸಂಜಯ್ ಕಪೂರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

ಶ್ರೀದೇವಿಗೆ ಸ್ಟಾರ್ ಪಟ್ಟ ತಂದು ಕೊಟ್ಟ ಮಿಸ್ಟರ್ ಇಂಡಿಯಾ ಸಿನಿಮಾದ ‘ಹವಾ ಹವಾಯಿ’ ಹಾಡಿನಲ್ಲಿ ಹೇಗೆ ಕಾಣಿಸುತ್ತಿದ್ದರೋ ಅದೇ ರೀತಿ ಮೇಣದ ಪ್ರತಿಮೆಗೆ ಅಲಂಕಾರ ಮಾಡಲಾಗಿದೆ. ಸುಮಾರು 20 ಮಂದಿ ನುರಿತ ಕಲಾವಿದರು ಕೆಲಸ ಮಾಡಿದ್ದಾರೆ. 

ಬೋನಿ ಕಪೂರ್ ಪ್ರತಿಮೆ ವಿಡಿಯೋವನ್ನು ಶೇರ್ ಮಾಡುತ್ತಾ, " ಶ್ರೀದೇವಿ ನಮ್ಮ ಮನಸ್ಸಿನಲ್ಲಿ ಮಾತ್ರವಲ್ಲ, ಮಿಲಿಯನ್ ಅಭಿಮಾನಿಗಳ ಹೃದಯದಲ್ಲಿ ನೆಲೆಸಿದ್ದಾರೆ. ಸಿಂಗಾಪುರ್ ನಲ್ಲಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಲು ಕಾತರದಿಂದ ಕಾಯುತ್ತಿದ್ದೇನೆ' ಎಂದು ಕೆಲದಿನಗಳ ಹಿಂದೆ ಎಕ್ಸೈಟ್ ಮೆಂಟ್ ವ್ಯಕ್ತಪಡಿಸಿದ್ದರು.