ಬಾಲಿವುಡ್ ನಟಿ ಸನ್ನಿ ಲಿಯೋನ್ ಮನೆಗೆ ಹೊಸ ಟ್ರಾವೆಲ್ ಪಾರ್ಟ್ನರ್ ಕರೆತಂದಿದ್ದಾರೆ. ಅಭಿಮಾನಿಗಳು ಸನ್ನಿ ಲಿಯೋನ್ಗೆ ಶುಭಕೋರಿದ್ದಾರೆ. ಮೈ ಬೀಸ್ಟ್ ಎಂದು ಕರೆದಿರುವ ಈ ಸಂಗಾತಿ ಯಾರು? ಏನಿದು ಸನ್ನಿ ಲಿಯೋನ್ ನಡೆ?
ಟೆಕ್ಸಾಸ್ (ಅ.20) ಬಾಲಿವುಡ್ ನಟಿ ಸನ್ನಿ ಲಿಯೋನ್ ನಟನೆ , ಸಿನಿಮಾ ಜೊತೆ ತಮ್ಮ ಲೈಫ್ಸ್ಟೈಲ್ ಮೂಲಕವೂ ಗಮನಸೆಳೆದಿದ್ದಾರೆ. ಇದೀಗ ಸನ್ನಿ ಲಿಯೋನ್ ಹೊಸ ಟ್ರಾವಲೆ ಪಾರ್ಟ್ನರ್ ಆಯ್ಕೆ ಮಾಡಿದ್ದಾರೆ. ಹೌದು, ಸನ್ನಿ ಲಿಯೋನ್ ಹೊಚ್ಚ ಹೊಸ ಜೀಪ್ ರಾಂಗ್ಲರ್ ರುಬಿಕಾನ್ ಕಾರು ಖರೀದಿಸಿದ್ದಾರೆ. ಈ ಕಾರಿನ ಭಾರತದ ಆರಂಭಿಕ ಬೆಲೆ 72.30 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಇನ್ನು ಟಾಪ್ ಮಾಡೆಲ್ ಹಾಗೂ ಕಸ್ಟಮೈಸೇಶನ್ ಸರಿಸುಮಾರು 1 ಕೋಟಿ ರೂಪಾಯಿ. ಈ ದುಬಾರಿ ಕಾರನ್ನು ಸನ್ನಿ ಲಿಯೋನ್ ಖರೀದಿಸಿದ್ದಾರೆ. ಈ ಖರೀದಿಯಲ್ಲಿ ಕೆಲ ವಿಶೇಷತೆಗಳಿವೆ. ಕಾರಣ ಸನ್ನಿ ಲಿಯೋನ್ ಈ ಕಾರು ಖರೀದಿಸಿದ್ದು ಭಾರತದಲ್ಲಿ ಅಲ್ಲ.
ಸನ್ನಿ ಲಿಯೋನ್ ರುಬಿಕಾನ್ ಕಾರು ಖರೀದಿಸಿದ್ದು ಎಲ್ಲಿ?
ಸನ್ನಿ ಲಿಯೋನ್ ಹೊಚ್ಚ ಹೊಸ ರುಬಿಕಾನ್ ಕಾರು ಖರೀದಿಸಿದ್ದು ಅಮೆರಿಕದ ಟೆಕ್ಸಾಸ್ನಲ್ಲಿ. ಕಾರು ಖರೀದಿಸಿ ಸಂತಸ ಹಂಚಿಕೊಂಡಿರುವ ಸನ್ನಿ ಲಿಯೋನ್ ಮೈ ಬೀಸ್ಟ್ ಎಂದು ಕರೆದಿದ್ದಾರೆ. ವಿಶೇಷ ಅಂದರೆ ಸನ್ನಿ ಲಿಯೋನ್ ವೈಟ್ ಜೀಪ್ ರಾಂಗ್ಲರ್ ರುಬಿಕಾನ್ ಕಾರು ಖರೀದಿಸಿದ್ದಾರೆ.
ರುಬಿಕಾನ್ ಕಾರು ಆಫ್ ರೋಡ್ ಸಾಮರ್ಥ್ಯದ ಕಾರು. ಪ್ರಮುಖವಾಗಿ ಟೆಕ್ಸಾಸ್ನಲ್ಲಿ ಈ ಕಾರು ಹೆಚ್ಚು ಸೂಕ್ತವಾಗಿದೆ. ಟೆಕ್ಸಾಸ್ನಲ್ಲಿ ಅತೀ ಹೆಚ್ಚಿನ ಆಫ್ ರೋಡ್ ಸ್ಥಗಳಿವೆ. ಹೀಗಾಗಿ ಬಹುತೇಕರು ಆಫ್ ರೋಡ್ ಕಾರುಗಳನ್ನೇ ಖರೀದಿಸುತ್ತಾರೆ. ಇದೀಗ ಸನ್ನಿ ಲಿಯೋನ್ ಕೂಡ ಆಫ್ ರೋಡಿಂಗ್ನಲ್ಲಿ ಕಿಂಗ್ ಏನಿಸಿಕೊಂಡಿರುವ ಜೀಪ್ ರಾಂಗ್ಲರ್ ರುಬಿಕಾನ್ ಕಾರು ಖರೀದಿಸಿದ್ದಾರೆ. ಬಳಿಕ ವಿಡಿಯೋ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಇದೇ ವೇಳೆ ಸ್ವತಃ ಸನ್ನಿ ಲಿಯೋನ್ ರುಬಿಕಾನ್ ಕಾರು ಖರೀದಿ ಯಾಕೆ ಎಂದು ವಿವರಣೆ ನೀಡಿದ್ದಾರೆ.
ಜೀಪ್ ರಾಂಗ್ಲರ್ ಕಾರು ಆಫ್ ರೋಡ್ ಡ್ರೈವ್ಗೆ ಉತ್ತಮವಾಗಿದೆ. ಟೆಕ್ಸಾಸ್ ಪ್ರದೇಶಕ್ಕೆ ಹೇಳಿ ಮಾಡಿಸಿದ ಎಸ್ಯುವಿ ಕಾರಾಗಿದೆ. ವಿಶೇಷವಾಗಿ ಆಫ್ ರೋಡಿಂಗ್ ಬಿಲ್ಟ್ ಕಾರು ಸ್ಪೋರ್ಟೀವ್ ಲುಕ್ ಹೊಂದಿದೆ. 2.0 ಲೀಟರ್ , ಫೋರ್ ಸಿಲಿಂಡರ್ ಎಂಜಿನ್ ಹೊಂದಿದೆ. 270 ಹೆಚ್ಪಿ ಪವರ್ಲ ಹಾಗೂ 400 ಎನ್ಎಂ ಟಾರ್ಕ್ ಸಾಮರ್ಥ್ಯ ಹೊಂದಿದೆ. 8 ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಹೊಂದಿದೆ. ಫೋರ್ ವ್ಹೀಲ್ ಡ್ರೈವ್ ಹೊಂದಿದೆ.
ಬಾಲಿವುಡ್ ಸೆಲೆಬ್ರೆಟಿಗಳಲ್ಲಿ ರುಬಿಕಾನ್ ಜನಪ್ರಿಯ
ಬಾಲಿವುಡ್ನ ಹಲವು ಸೆಲೆಬ್ರೆಟಿಗಳು ಜೀಪ್ ರಾಂಗ್ಲರ್ ರುಬಿಕಾನ್ ಕಾರು ಮಾಲೀಕರಾಗಿದ್ದಾರೆ. ಹೃತಿಕ್ ರೋಶನ್, ಸೈಫ್ ಆಲಿ ಖಾನ್, ಕರನ್ ಕುಂದರ್, ಸಂಜಯ್ ಮಿಶ್ರಾ ಸೇರಿದಂತೆ ಹಲವು ಸೆಲೆಬ್ರಿಟಿಗಳು ಜೀಪ್ ರಾಂಗ್ಲರ್ ರುಬಿಕಾನ್ ಕಾರು ಹೊಂದಿದ್ದಾರೆ. ಇದೀಗ ಈ ಸಾಲಿಗೆ ಸನ್ನಿ ಲಿಯೋನ್ ಕೂಡ ಸೇರಿಕೊಂಡಿದ್ದಾರೆ. ಆದರೆ ಸನ್ನಿ ಲಿಯೋನ್ ಅಮೆರಿಕದಲ್ಲಿ ರುಬಿಕಾನ್ ಕಾರು ಖರೀದಿಸಿದ್ದಾರೆ.

ಸನ್ನಿ ಲಿಯೋನ್ ಕಾರು ಕಲೆಕ್ಷನ್
ಸನ್ನಿ ಲಿಯೋನ್ ಬಳಿ ಹಲವು ಐಷಾರಾಮಿ ಕಾರುಗಳಿವೆ. ಅತ್ಯಂತ ದುಬಾರಿ ಮೆಸರಾತಿ ಕ್ವಾರ್ಟ್ರೋಪ್ರೋರ್ಟ್, BMW 7 ಸಿರೀಸ್, ಔಡಿ 5, ಎಂಜಿ ಗೋಸ್ಟರ್ ಸೇರಿದಂತೆ ಕೆಲ ದುಬಾರಿ ಕಾರುಗಳಿವೆ. ಇದೀಗ ಸನ್ನಿ ಲಿಯೋನ್ ಕಾರು ಕಲೆಕ್ಷನ್ಗೆ ವೈಟ್ ಜೀಪ್ ರಾಂಗ್ಲರ್ ರುಬಿಕಾನ್ ಕಾರು ಸೇರಿಕೊಂಡಿದೆ.


