ಬಾಲಿವುಡ್ ನಟರು ಒಂದು ವರ್ಷದಲ್ಲಿ ಕೋಟಿಕೋಟಿ ಸಂಪಾದಿಸುತ್ತಾರೆ. ಆದರೆ ಅವರ ಆದಾಯದಲ್ಲಿ ತೆರಿಗೆ ಎಷ್ಟು ಕಟ್ಟುತ್ತಾರೆ ಎನ್ನುವುದು ಇದೀಗ ಬಹಿರಂಗವಾಗಿದೆ.

ಬಾಲಿವುಡ್ ಆ್ಯಕ್ಷನ್ ಹೀರೋ ಅಕ್ಷಯ್ ಕುಮಾರ್ ವಾರ್ಷಿಕ ರೂ. 213 ಕೋಟಿ ಆದಾಯವನ್ನು ಸಂಪಾದಿಸಿ ರೂ. 18 ಕೋಟಿ ತೆರಿಗೆ ಕಟ್ಟುತ್ತಾರೆ. ಸಲ್ಮಾನ್ ಖಾನ್ ತಮ್ಮ ರೂ. 219 ಕೋಟಿ ಆದಾಯದಲ್ಲಿ 11 ಕೋಟಿ ತೆರಿಗೆ ಕಟ್ಟುತ್ತಿದ್ದಾರೆ. ಇನ್ನು ಶಾರುಕ್ ಖಾನ್ ವಾರ್ಷಿಕ ರೂ. 170 ಕೋಟಿ ಆದಾಯವನ್ನು ಗಳಿಸುತ್ತಾರೆ, ಅದರಲ್ಲಿ ರೂ. 10.5 ಕೋಟಿ ಹಣವನ್ನು ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಪಾವತಿಸುತ್ತಾರೆ.

ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ 219 ಕೋಟಿ ಆದಾಯವನ್ನು ಹೊಂದಿದ್ದು ಕೇವಲ ರೂ. 5 ಕೋಟಿ ಪಾವತಿಸುತ್ತಾರೆ. ಇನ್ನು ಮಿ. ಫರ್ಪೆಕ್ಟ್ ಎಂದೇ ಕರೆಸಿಕೊಳ್ಳುವ ಅಮೀರ್ ಖಾನ್ ವಾರ್ಷಿಕ ರೂ. 150 ಕೋಟಿ ಆದಾಯವನ್ನು ಗಳಿಸುತ್ತಾರೆ ಅದರಲ್ಲಿ ರೂ. 4.5 ಕೋಟಿಯನ್ನು ತೆರಿಗೆ ಕಟ್ಟುತ್ತಾರೆ.