ಮುಂಬೈ[ಜ.22] ಕ್ವೀನ್ ಚಿತ್ರದ ನಿರ್ದೇಶಕನ ಮೇಲೆ ಮೀ ಟೂ ಆರೋಪವನ್ನು ಮಾಡಿದ್ದ ನಟಿ ಕಂಗನಾ ರಣಾವತ್ ಈಗ ಮತ್ತೊಂದು ಹೇಳಿಕೆ ನೀಡಿದ್ದಾರೆ. ನಿಮ್ಮ ಸುರಕ್ಷತೆಗೆ ನೀವೇ ಜವಾಬ್ದಾರರಾಗಿರುತ್ತೀರಿ ಎಂದು ಹೇಳುತ್ತ ತಮಗಾದ ಕರಾಳ ಅನುಭವ ಒಂದನ್ನು ಹಂಚಿಕೊಂಡಿದ್ದಾರೆ. 

ಜನರ ಗುಂಪಿನ ಮಧ್ಯೆ ಇದ್ದಾಗ ವ್ಯಕ್ತಿಯೊಬ್ಬ ನನ್ನ ಹಿಂಬದಿ[ಪೃಷ್ಠದ] ಭಾಗವನ್ನು ಜೋರಾಗಿ ತಾಕಿದ್ದ. ನನ್ನ ಬಲ ಬದಿಗೆ ಇದ್ದವ ಬಹಳ ಕಾಲದಿಂದ ನನ್ನನ್ನೇ ದಿಟ್ಟಿಸುತ್ತಿದ್ದ ಇದನ್ನು ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದರೂ ಇದು ದೌರ್ಜನ್ಯವೇ ಎಂದು ಹೇಳಿದ್ದಾರೆ.

ಕಸ ಹೊಡೆಯುತ್ತಿದ್ದ ಮಹಿಳೆ ತಬ್ಬಿಕೊಂಡು ಹಿಂಸೆ

ಮಹಿಳೆಯರು ಇಂಥ ವಿಚಾರದಲ್ಲಿ ಹಿಂದಕ್ಕೆ ಸರಿಯುವುದು ಒಳ್ಳೆಯದದಲ್ಲ. ಮಾಧ್ಯಮ, ಪೊಲೀಸ್ ಸಹಾಯ ಪಡೆದುಕೊಳ್ಳಬೇಕು. ಕಾನಮಾಂಧರ ಬಣ್ಣ ಬಯಲು ಮಾಡಬೇಕು. ನಿಮ್ಮ ಸುರಕ್ಷತೆಗೆ ನೀವೇ ಜವಾಬ್ದಾರಿ ಎಂದು ಹೇಳಿದ್ದಾರೆ. ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿದ ಕಂಗನಾ ಈ ವಿಚಾರ ಹಂಚಿಕೊಂಡರು.