ನಿಮ್ಮ ಹತ್ರ ಹಣವಿಲ್ಲದಿದ್ದರೇನಂತೆ, ನಗೋದಕ್ಕೆ ಕಾಸು ಕೊಡಬೇಕಾಗಿಲ್ಲ.

ನರೇಂದ್ರ ಮೋದಿ ನೇತೃತ್ವದ ಸರ್ಕಾರ ನವೆಂಬರ್ 08ರಂದು 500 ಹಾಗೂ 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಅಮಾನ್ಯಮಾಡಿತು. ಇದು ಸಾಮಾನ್ಯ ಜನರಲ್ಲಿ ಸಾಕಷ್ಟು ಅರಾಜಕತೆ, ಗೊಂದಲ, ಸಮಸ್ಯೆಗಳಿಗೆ ಕಾರಣವಾಗಿದ್ದಂತೂ ಸುಳ್ಳಲ್ಲ.

ಎಟಿಎಂಗಳಲ್ಲಿ ನೋ ಕ್ಯಾಶ್ ಎಂಬ ತಲೆಬರಹವಿದ್ದರೆ, ಬ್ಯಾಂಕ್ ಮುಂದೆ ಫುಲ್ ಕ್ಯೂ... ಇದು ಒಂದು ತಿಂಗಳು ಕಳೆದರೂ ಇದಕ್ಕಿನ್ನು ಪರಿಹಾರ ಸಿಕ್ಕಿಲ್ಲ.  ಒಂದು ಕಡೆ 2000 ರೂಪಾಯಿಯ ಒಂದು ನೋಟು ಪಡೆಯಲು ಬ್ಯಾಂಕಿನ ಮುಂದೆ ಕ್ಯೂನಿಲ್ಲುತ್ತಿದ್ದರೆ, ಮತ್ತೊಂದೆಡೆ ಭ್ರಷ್ಟ ರಾಜಕಾರಣಿಗಳ, ಅಧಿಕಾರಿಗಳ ಮನೆಗಳಲ್ಲಿ 2000 ರೂಪಾಯಿಯ ಲಕ್ಷ-ಲಕ್ಷ ರೂಪಾಯಿಗಳು ಪತ್ತೆಯಾಗುತ್ತಿವೆ.. ಈ ಯೋಜನೆ ಜಾರಿಯಲ್ಲಿನ ವಿಫಲತೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಈ ವಿಡಿಯೋ...