ದೇಸಿ ಫುಡ್ ಪ್ರೀತಿ ‘ನಂಗೆ ತುಪ್ಪ ಅನ್ನ ಊಟ ಮಾಡೋದು ಬಹಳ ಇಷ್ಟ’ ಅನ್ನೋ ಸಾನ್ಯಾಗೆ ಮನೆ ಊಟ ಅಂದ್ರೆ ಪ್ರೀತಿ. ಉಳಿದ ಬಾಲಿವುಡ್ ತಾರೆಯರೆಲ್ಲ ಅನ್ನದಿಂದ ದೂರ ಓಡ್ಬೇಕಾದ್ರೆ ಈ ಹುಡುಗಿ ತುಪ್ಪದನ್ನ, ಮೊಸರನ್ನ ವ್ಯಾಮೋಹದಲ್ಲಿ ಬಿದ್ದಿದ್ದಾರೆ. ‘ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಹೆಲ್ದಿಫುಡ್ ತಿನ್ಬೇಕು’ ಅನ್ನೋ ಹುಡುಗಿ ತಾನು ಮಾತ್ರ ಜಂಕ್‌ಫುಡ್ ಪ್ರಿಯೆ. ತನ್ನ ಡಯೆಟ್‌ಗೆ ಚೀಟ್ ಮಾಡಿ ಆಗಾಗ ಚಾಟ್ಸ್ ತಿನ್ನೋದು ಈಕೆಗಿಷ್ಟ. ಉಳಿದಂತೆ ಮನೆ ತಿಂಡಿಯನ್ನೇ ತಿನ್ನೋದು.

 

 
 
 
 
 
 
 
 
 
 
 
 
 

Kithe kale kale jaye jane ho? With my favourite @shazebsheikh and 📸 by @abhishekkapur20 ♥️ #lamberghini

A post shared by Sanya Malhotra💥 (@sanyamalhotra_) on Jan 9, 2019 at 8:25am PST

ಡ್ಯಾನ್ಸ್ ಕ್ರೇಜ್

ಸನ್ಯಾ ಇನ್‌ಸ್ಟಾಗ್ರಾಮ್‌ಗೆ ಭೇಟಿ ನೀಡಿದರೆ ಆಕೆಗೆ ಡ್ಯಾನ್ಸ್ ಕ್ರೇಜ್ ಎಷ್ಟಿದೆ ಅನ್ನೋದು ತಿಳಿಯುತ್ತೆ. ಡ್ಯಾನ್ಸ್ ಮುಂದೆ ಬೇರ‌್ಯಾವ ಫಿಟ್‌ನೆಸ್ಸೂ ನಿಲ್ಲಲ್ಲ ಅನ್ನೋ ಸಾನ್ಯಾ ದಿನದಲ್ಲಿ ಮಿನಿಮಮ್ 1 ಗಂಟೆ ಡ್ಯಾನ್ಸ್‌ಗೆ ಮೀಸಲಿಡುತ್ತಾರೆ. 30 ನಿಮಿಷ ಡ್ಯಾನ್ಸ್ ಮಾಡಿದರೆ 200 ರಿಂದ 800 ಕ್ಯಾಲೊರಿ ಬರ್ನ್ ಮಾಡಬಹುದು ಅನ್ನುವುದು ಈಕೆಯ ಅನುಭವದ ಮಾತು.

ಎತ್ತರ: 5 ಅಡಿ 2 ಇಂಚು
ತೂಕ: 51 ಕೆಜಿ
ಸುತ್ತಳತೆ: 32-26-32