ಕಾರ್ಗಿಲ್ ವಿಜಯ್ ದಿವಸ್ ಗೆ 20 ವರ್ಷ ತುಂಬಿದ ಹಿನ್ನಲೆಯಲ್ಲಿ ಬಾಲಿವುಡ್ ನಟರು ನೌಕಾಪಡೆ ಸಿಬ್ಬಂದಿ ಜತೆ ಫುಟ್ ಬಾಲ್ ಆಡಿದ್ದಾರೆ. ಸೈನಿಕರಿಗೆ ಶುಭ ಕೋರಿದ್ಧಾರೆ. 

ಮುಂಬೈನಲ್ಲಿ ನಿನ್ನೆಯಿಂದ ವರುಣ ರಾಯನ ಆರ್ಭಟ ಹೆಚ್ಚಾಗಿದೆ. ಮಳೆಯ ನಡುವೆಯೇ ಬಾಲಿವುಡ್ ನಟರಾದ ರಣಬೀರ್ ಕಪೂರ್, ಅಭಿಷೇಕ್ ಬಚ್ಚನ್, ಅರ್ಜುನ್ ಕಪೂರ್, ಇಶಾನ್ ಕಟ್ಟರ್, ಶಶಾಂಕ್ ಕೈತನ್, ಕರಣ್ ವಾಹಿ, ಡಿನೋ ಮೋರಿಯಾ ಸೇರಿದಂತೆ ಇತರರು ನೌಕಾ ಸಿಬ್ಬಂದಿ ಜೊತೆ ಮುಂಬೈನ ಗ್ರೌಂಡ್ ವೊಂದರಲ್ಲಿ ಆಟವಾಡಿದ್ದಾರೆ.  ಬಿ- ಟೌನ್ ಮಂದಿ ಬ್ಲೂ ಬಣ್ಣದ ಡ್ರೆಸ್ ಧರಿಸಿದರೆ, ನೌಕಾ ಸಿಬ್ಬಂದಿ ಕೆಂಪು ಬಣ್ಣದ ಡ್ರೆಸ್ ಧರಿಸಿದ್ದರು. 

ಜುಲೈ 26, 2019 ಕ್ಕೆ ಕಾರ್ಗಿಲ್ ಯುದ್ಧ ನಡೆದು 20 ವರ್ಷ ತುಂಬುತ್ತದೆ. ಪ್ರತಿ ಜುಲೈ 26 ರಂದು ಕಾರ್ಗಿಲ್ ವಿಜಯ್ ದಿವಸವನ್ನಾಗಿ ಆಚರಿಸಲಾಗುತ್ತದೆ. ನಮ್ಮ ಹೆಮ್ಮೆಯ ಸೈನಿಕರಿಗೆ ನಮನ ಸಲ್ಲಿಸಲಾಗುತ್ತದೆ.