ಮನೋಜ್‌ ಅಭಿನಯದ ಚೊಚ್ಚಲ ಚಿತ್ರ‘ಟಕ್ಕರ್‌’ ರಿಲೀಸ್‌ಗೆ ರೆಡಿ ಆಗಿದೆ. ಆ ಚಿತ್ರ ಹೊರಬರುತ್ತಿದ್ದಂತೆ ಎರಡನೇ ಚಿತ್ರ ಸೆಟ್ಟೇರುವುದು ಗ್ಯಾರಂಟಿ ಆಗಿದೆ. ಆ ಹೊತ್ತಿಗೆ ಸಾಕ್ಷಿ ಮಲಿಕ್‌ ಆಯ್ಕೆ ಬಹುತೇಕ ಫೈನಲ್‌ ಆಗುವ ಸಾಧ್ಯತೆಗಳಿವೆ ಎನ್ನುತ್ತಿವೆ ಚಿತ್ರತಂಡದ ಮೂಲಗಳು. ಈ ಚಿತ್ರವನ್ನು ‘ಹುಲಿರಾಯ’ ಖ್ಯಾತಿಯ ಕೋಗಿಲು ನಾಗೇಶ್‌ ನಿರ್ಮಿಸುತ್ತಿದ್ದಾರೆ.

ರವಿಚಂದ್ರನ್‌ ಮಗನ ಟೀಸರ್‌ಗೆ ದರ್ಶನ್‌ ವಾಯ್ಸ್

ಬಾಲಿವುಡ್‌ ಬ್ಯೂಟಿ ಸಾಕ್ಷಿ ಮಲಿಕ್‌ ಮಾಡೆಲ್‌ ಕಮ್‌ ನಟಿ. ಹುಟ್ಟಿಬೆಳೆದಿದ್ದೆಲ್ಲ ದೆಹಲಿಯಾದರೂ ಆ್ಯಕ್ಟಿಂಗ್‌ ಕರಿಯರ್‌ ಅರಸಿ ಬಂದಿದ್ದು ಮುಂಬೈಗೆ. ‘ಸೋನು ಕೆ ಟಿಟು ಸ್ವೀಟಿ’ ಹೆಸರಿನ ಚೊಚ್ಚಲ ಚಿತ್ರದ ಮೂಲಕವೇ ಬಾಲಿವುಡ್‌ನಲ್ಲಿ ಸಿನಿಪ್ರಿಯರ ಮನಗೆದ್ದ ಚೆಲುವೆ.

‘ಸೋನು ಕೆ ಟಿಟು ಸ್ವೀಟಿ’ ಚಿತ್ರದಲ್ಲಿನ ಡಿಗ್ಗಿ ಡಿಗ್ಗಿ ಬಾಮ್‌ ಹಾಡಿಗೆ ಸಖತ್‌ ಮೈ ಬಳುಸಿಕಿದ್ದು ದೊಡ್ಡ ಸುದ್ದಿ ಆಗಿತ್ತು. ಈ ಹಾಡಿನ ವಿಡಿಯೋ ವೈರಲ್‌ ಆಗಿದ್ದು ಮಾತ್ರವಲ್ಲ, ಟ್ರೋಲ್‌ಗಳಲ್ಲಿ ಸಾಕ್ಷಿ ಮಲಿಕ್‌ ರಾತ್ರೋರಾತ್ರಿ ಜನಪ್ರಿಯತೆ ಪಡೆದಿದ್ದರು. ಇಂತಿಪ್ಪಾ ನಟಿ ಮೇಲೆ ಈಗ ಸ್ಯಾಂಡಲ್‌ವುಡ್‌ ನಿರ್ದೇಶಕರ ಕಣ್ಣು ಬಿದ್ದಿದೆ. ಮನೋಜ್‌ ಸಿನಿಮಾಕ್ಕೆ ಅವರನ್ನೇ ನಾಯಕಿಯನ್ನಾಗಿ ತರಲು ಹೊರಟಿದೆ ಚಿತ್ರತಂಡ.