‘ಕೇದಾರ್‌ನಾಥ್‌’ ಚಿತ್ರ ಕೆಲವಷ್ಟುಕಾರಣಕ್ಕೆ ಸಾರಾ ಅಲಿ ಖಾನ್‌ಗೆ ತುಂಬಾ ಮುಖ್ಯ. ಅದು ಆಕೆಗೆ ಮೊದಲ ಚಿತ್ರ. ಜೊತೆಗೆ ಸುಶಾಂತ್‌ ಸಿಂಗ್‌ ರಜಪೂತ್‌ನಂತಹ ಬಾಯ್‌ಫ್ರೆಂಡ್‌ ಕೊಟ್ಟಚಿತ್ರವೂ ಹೌದು ಎಂದು ಗಾಸಿಪ್‌ ಹರಡಿತ್ತು. ಇದೆಲ್ಲದ್ದಕ್ಕೂ ಹೆಚ್ಚು ತಲೆ ಕೆಡಿಸಿಕೊಳ್ಳದೇ ತಮ್ಮ ಪಾಡಿಗೆ ತಾವಿದ್ದ ಸಾರಾ ಅಲಿ ಖಾನ್‌ಗೆ ಚಿಕ್ಕಮ್ಮ ಕರೀನಾ ಕಪೂರ್‌ ಖಾನ್‌ ಒಂದು ಕಿವಿಮಾತು ಹೇಳಿದ್ದಾರೆ. 

 ಅದು ಖಾಸಗಿ ಚಾಟ್‌ ಶೋ ಒಂದರಲ್ಲಿ. ಸಾರಾಗೆ ಏನಾದರೂ ಅಡ್ವೈಸ್‌ ಕೊಡುವುದಾದರೆ ಏನು ಹೇಳಬಯಸುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಕರೀನಾ ಕೊಟ್ಟಪುಟ್ಟಉತ್ತರ ‘ನೀನು ನಿನ್ನ ಮೊದಲ ಹೀರೋ ಜೊತೆಗೆ ಡೇಟಿಂಗ್‌ ಮಾಡದಿರು’ ಎಂದು.

ಇದರರ್ಥ ಮೊದಲ ಹೀರೋ ಆಗಿದ್ದ ಸುಶಾಂತ್‌ ಸಿಂಗ್‌ ರಜಪೂತ್‌ ಜೊತೆಗೆ ಅಂತರ ಕಾಯ್ದುಕೊಂಡು ಬಾಳು ಎನ್ನುವುದೇ. ಚಿಕ್ಕಮ್ಮನಾಗಿ ಮಗಳು ಒಳ್ಳೆಯ ದಾರಿಯಲ್ಲಿ ಹೋಗಬೇಕು ಎನ್ನುವ ಕಾರಣಕ್ಕಾಗಿ ಕರೀನಾ ಹೀಗೆ ಹೇಳಿ, ಬಣ್ಣದ ಲೋಕದ ಮೊದಲ ದಿನಗಳಲ್ಲಿಯೇ ಮಗಳಿಗೆ ಕಿವಿಮಾತು ಹೇಳಿ ಸರಿದಾರಿಗೆ ತರುವ ಪ್ರಯತ್ನ ಇದಾಗಿರಬಹುದು. ಏನಾದರಾಗಲಿ ಚಿಕ್ಕಮ್ಮನ ಪುಟ್ಟಮಾತಿಗೆ ಸಾರಾ ಏನು ಹೇಳುವಳೋ ಕಾದು ನೋಡಬೇಕು.

96 ಕೆಜಿ ತೂಗುತ್ತಿದ್ದ ಹುಡುಗಿ ಬಳುಕುವ ಬಳ್ಳಿಯಾದದ್ದು ಹೇಗೆ?