ನಟಿ ಕಂಗನಾ ರಾಣಾವತ್ ಸಿನಿಮಾಗಳಿಗಿಂತ ಹೆಚ್ಚಾಗಿ ಸಾಮಾಜಿಕ ಕೆಲಸಗಳಲ್ಲೇ ಹೆಚ್ಚು ಫೇಮಸ್ ಆಗುತ್ತಿದ್ದಾರೆ. ಇತ್ತೀಚಿಗೆ ಹೆಚ್ಚೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ. ಕಾವೇರಿ ಕೂಗು ಅಭಿಯಾನಕ್ಕೆ ಸಾಥ್ ನೀಡಿದ್ದಾರೆ. 

ನದಿಗಳ ರಕ್ಷಿಸಿ ಅಭಿಯಾನದ ರೂವಾರಿ ಈಶ ಫೌಂಡೇಷನ್‌ ಸಂಸ್ಥಾಪಕ ಜಗ್ಗಿ ವಾಸುದೇವ್‌ (ಸದ್ಗುರು) ಅವರು ರಾಜ್ಯದ ಪ್ರಮುಖ ಜೀವನದಿ ಕಾವೇರಿ ಪುನಶ್ಚೇತನಕ್ಕಾಗಿ ‘ಕಾವೇರಿ ಕೂಗು’ ಅಥವಾ ‘ಕಾವೇರಿ ಕಾಲಿಂಗ್‌’ಎಂಬ ಅಭಿಯಾನ ರೂಪಿಸಿದ್ದಾರೆ. ಕಾವೇರಿ ಅಚ್ಚುಕಟ್ಟು ಪಾತ್ರದಲ್ಲಿ ಗಿಡಗಳನ್ನು ಬೆಳೆಸುವ, ರೈತರ ಆದಾಯವನ್ನೂ ದ್ವಿಗುಣ ಮಾಡುವ ಮಹತ್ವಾಕಾಂಕ್ಷಿ ಅಭಿಯಾನ ಇದು.

ಈ ಅಭಿಯಾನಕ್ಕೆ ಸೆಲಬ್ರಿಟಿಗಳಾದಿಯಾಗಿ ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬೆಂಬಲ ಸಿಗುತ್ತಿದೆ. ನಟಿ ಕಂಗನಾ ರಾಣಾವತ್ ಕೂಡಾ ಈ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಅಭಿಯಾನಕ್ಕೆ 42 ಲಕ್ಷ ರೂಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಜೊತೆಗೆ ಕಾವೇರಿ ಕೂಗಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುವುದಾಗಿ ಹೇಳಿದ್ದಾರೆ. ಈ ಹಣದಿಂದ ಕಾವೇರಿ ತಟಗಳಲ್ಲಿ 1 ಲಕ್ಷ ಸಸಿಗಳನ್ನು ನೆಡಲಾಗುತ್ತದೆ. 

View post on Instagram

ಬಡವರಿಗೆ ಡೊನೆಟ್ ಮಾಡಿ ಎಂದು ಹೇಳಲಾಗುವುದಿಲ್ಲ. ಯಾರಿಗೆ ಸಾಧ್ಯವೋ ಅವರೆಲ್ಲಾ ಕನಿಷ್ಠ 2 ಸಸಿಗಳನ್ನು ದಾನ ಮಾಡಿ. ಇದು ನಮ್ಮ ಪರಿಸರದಲ್ಲಿ ಬಾರೀ ಬದಲಾವಣೆ ತರುತ್ತದೆ. ನಾವಿದನ್ನು ಹಗುರವಾಗಿ ಪರಿಗಣಿಸಲಾಗುವುದಿಲ್ಲ’ ಎಂದು ಕಂಗನಾ ಹೇಳಿದ್ದಾರೆ.