ಅವರ ಪಾಲಿಗೆ ಸಿಗುತ್ತಿರುವ ಚಿತ್ರಗಳ ಸಂಖ್ಯೆ ಕಡಿಮೆಯಾಗಿದೆಯೇ? ಮುಂದಿನ ಅವರ ‘ಮಣಿಕರ್ಣಿಕಾ’ ಚಿತ್ರದ ತಯಾರಿ ಹೇಗೆಲ್ಲಾ ನಡೆಯುತ್ತಿದೆ ಎಂದು ಅವರೇ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.
ಕಂಗನಾ ರಾಣಾವತ್ ನೇರ, ನಿಷ್ಠೂರವಾದಿ ಎಂದೆಲ್ಲಾ ಹೇಳುವವರಿದ್ದಾರೆ.ಯಾರು ತಲೆ ಕೆಡಿಸಿಕೊಳ್ಳಲಿ ಬಿಡಲಿ ಧೈರ್ಯವಾಗಿ ಅನ್ನಿಸಿದ್ದನ್ನು ಹೇಳಿ ಮುಗಿಸುವ ಗಟ್ಟಿಗಿತ್ತಿ ಕಂಗನಾ ತನ್ನ ಅದೇ ಸ್ವಭಾವದಿಂದ ಸ್ವಲ್ಪ ಪೆಟ್ಟು ತಿಂದಿದ್ದಾರಾ? ಅವರ ಪಾಲಿಗೆ ಸಿಗುತ್ತಿರುವ ಚಿತ್ರಗಳ ಸಂಖ್ಯೆ ಕಡಿಮೆಯಾಗಿದೆಯೇ? ಮುಂದಿನ ಅವರ ‘ಮಣಿಕರ್ಣಿಕಾ’ ಚಿತ್ರದ ತಯಾರಿ ಹೇಗೆಲ್ಲಾ ನಡೆಯುತ್ತಿದೆ ಎಂದು ಅವರೇ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.
ಅವರ ಮನದ ಮಾತುಗಳಲ್ಲಿ ಕೆಲವು ಇಂಟರೆಸ್ಟಿಂಗ್ ಮಾತುಗಳು ಇಲ್ಲಿವೆ
* ಕಂಗನಾಗೆ ಸ್ವಂತ ಪ್ರೊಡಕ್ಷನ್ ಹೌಸ್ ಕಟ್ಟಬೇಕು ಎಂದು ದೊಡ್ಡ ಆಸೆ ಇದೆ ಎನ್ನುವುದು ಹಿಂದೆಯೇ ಗೊತ್ತಿತ್ತು. ಕೆಲವಾರು ಕಡೆಗಳಲ್ಲಿ ಅದನ್ನು ಹೇಳಿಕೊಂಡಿದ್ದರೂ ಕೂಡ. ಆದರೆ ಈಗ ಅದಕ್ಕೆ ಸಾಕಾಗುವಷ್ಟು ಆರ್ಥಿಕ ಶಕ್ತಿ ಇಲ್ಲದ ಕಾರಣ ಆ ಯೋಚನೆಯನ್ನು ಮುಂದೆ ತಳ್ಳಿದ್ದಾರೆ.
* ಈ ವರ್ಷ ಅವರ ಚಿತ್ರಗಳ ಸಂಖ್ಯೆ ತುಂಬಾ ಕಡಿಮೆಯಾಗಿದೆ. ತನ್ನಿಮಿತ್ತ ಆದಾಯದ ಪ್ರಮಾಣವೂ ತಳ ಕಚ್ಚಿದೆ. ಆದರೆ ಸಂಭಾವನೆ ಪ್ರಮಾಣದಲ್ಲಿ ಮಾತ್ರ ಯಾವುದೇ ಬದಲಾವಣೆಯಾಗಿಲ್ಲ. ಸದ್ಯಕ್ಕೆ ಸಹಿ ಹಾಕಿರುವ ಚಿತ್ರಗಳು ಮೂರು ಮಾತ್ರ. ಇದನ್ನೆಲ್ಲಾ ಖುದ್ದು ಅವರೇ ಹಂಚಿಕೊಂಡಿರುವುದು ವಿಶೇಷ.
* ‘ಮಣಿಕರ್ಣಿಕಾ’ ಮಹತ್ವದ ಚಿತ್ರದಲ್ಲಿ ನಟಿಸುತ್ತಿರುವ ಕಂಗನಾ ಮುಂದೆ ಯುವಕರಿಗೆ, ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಚಿತ್ರಗಳನ್ನು ಮಾಡುತ್ತೇನೆ. ಸಂಪೂರ್ಣ ಗಮನವೆಲ್ಲಾ ಯಶಸ್ಸಿನ ಕಡೆಗೆ ಕೇಂದ್ರೀಕರಿಸುತ್ತೇನೆ ಎಂದೆಲ್ಲಾ ಹೇಳಿಕೊಂಡಿರುವುದು ಮುಂದಿನ ದಿನಗಳಲ್ಲಿ ಅವರ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಲು ಕಾರಣವಾಗಿದೆ.
