ಬಾಲಿವುಡ್ ಜನಪ್ರಿಯ ಡ್ಯಾನ್ಸರ್ ಅಭಿಜೀತ್ ಶಿಂಧೆ ಆತ್ಮಹತ್ಯೆ! ಖಿನ್ನತೆಯಿಂದ ಬಳಲುತ್ತಿದ್ದ ನೃತ್ಯಗಾರ ಅಭಿಜಿತ್ ಶಿಂಧೆ! ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು! ರಣಬೀರ್ ಕಪೂರ್, ಅಜಯ್ ದೇವಗನ್ ಗೆ ಡ್ಯಾನ್ಸ್ ಹೇಳಿಕೊಟ್ಟಿದ್ದ ಶಿಂಧೆ! ಪತ್ನಿ, ಮಗಳು ದೂರವಾಗಿದ್ದಕ್ಕೆ ಬೇಸತ್ತಿದ್ದ ಅಭಿಜಿತ್ ಶಿಂಧೆ
ಮುಂಬೈ(ಆ.24): ಬಾಲಿವುಡ್ ನ ಜನಪ್ರಿಯ ನೃತ್ಯಗಾರ ಅಭಿಜಿತ್ ಶಿಂಧೆ ಮುಂಬೈನ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ತೀವ್ರ ಮಾನಸಿಕ ಒತ್ತಡದಿಂದ ಬಳಲುತ್ತಿದ್ದ ಶಿಂಧೆ ಮುಂಬೈನ ಬಂಧೂಪ್ ಬಳಿ ಇರುವ ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ. ರಣಬೀರ್ ಕಪೂರ್ ಮತ್ತು ಅಜಯ್ ದೇವಗನ್ ಅವರಂತ ಮೇರು ನಟರೊಡನೆ ಕೆಲಸ ಮಾಡಿದ್ದ ಶಿಂಧೆ, ದೀರ್ಘ ಕಾಲದಿಂಡ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಮೂರು ತಿಂಗಳ ಹಿಂದೆ ಅಭಿಜಿತ್ ಪತ್ನಿ ಅವರನ್ನು ತ್ಯಜಿಸಿದ್ದರು. ಪತಿ-ಪತ್ನಿಯರಲ್ಲಿ ಮನಸ್ತಾಪವಿತ್ತು.ಅಭಿಜೀತ್ ಪತ್ನಿ ಅವರಿಗೆ ಮಗಳನ್ನು ಭೇಟಿಯಾಗುವುದಕ್ಕೆ ಸಹ ಅವಕಾಶ ನೀಡಿರಲಿಲ್ಲ ಎನ್ನಲಾಗಿದೆ.

ಈ ಎಲ್ಲಾ ಕಾರಣದಿಂದ ಬೇಸತ್ತಿದ್ದ ಅಭಿಜಿತ್ ನಿನ್ನೆ ಬೆಳಗ್ಗೆ ತಮ್ಮ ಮನೆಯಲ್ಲಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೋಲೀಸರು ಆತ್ಮಹತ್ಯೆ ಪ್ರಕರಣ ದಾಕಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
