ಬಿಗ್ ಬಿ ಅಮಿತಾಬ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 11, Oct 2018, 1:14 PM IST
Bollywood Big B Amitabh Bachchan celebrates his 76 th birthday on October 11
Highlights

ಅಮಿತಾಭ್ ಬಚ್ಚನ್' ಬಾಲಿವುಡ್ ಕಂಡ ಅದ್ಭುತ ಪ್ರತಿಭೆ ಎಂದರೆ ಅತಿಶಯೋಕ್ತಿಯಲ್ಲ  | ಇವರ ಒಂದೊಂದು ಸಿನಿಮಾಗಳೂ ಸೂಪರ್ ಹಿಟ್ | ಇಂದು 76 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ಬಿಗ್ ಬಿ 

ನವದೆಹಲಿ (ಅ. 11): ಬಿಗ್ ಬಿ ಅಮಿತಾಭ್ ಬಚ್ಚನ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 76 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ಬಿಗ್ ಬಿ. ಅವರ ನಿವಾಸ ಜಲ್ಸಾದ ಎದುರು ಅಭಿಮಾನಿಗಳು ಸೇರಿ ಅಮಿತಾಭ್ ಬಚ್ಚನ್‌ಗೆ ಶುಭ ಕೋರಿದ್ದಾರೆ. 

ಕಳೆದ ಐದು ದಶಕಗಳಿಂದ ಬಾಲಿವುಡ್ ನಲ್ಲಿ ಮುಂಚೂಣಿಯಲ್ಲಿದ್ದಾರೆ ಅಮಿತಾಭ್. 70 ರ ದಶಕದಲ್ಲಿ ಆ್ಯಂಗ್ರಿ ಯಂಗ್ ಮ್ಯಾನ್ ಇಮೇಜ್ನೊಂದಿಗೆ ಬಾಲಿವುಡ್ ಗೆ ಕಾಲಿಟ್ಟ ಬಿಗ್ ಬಿ ಆರಂಭಿಕ ಚಿತ್ರಗಳಲ್ಲೇ ಯಶಸ್ಸು ಕಂಡರು. 70 ರ ದಶಕದಲ್ಲಿ ತೆರೆ ಕಂಡ ಜಂಜೀರ್, ಶೋಲೆ, ದೀವಾರ್ ಚಿತ್ರಗಳು ಇವರಿಗೆ ಹೆಸರನ್ನು ತಂದು ಕೊಟ್ಟವು. ಆ ನಂತರ ಇವರ ಮಾಡಿದ್ದೆಲ್ಲವೂ ಹಿಟ್ ಚಿತ್ರಗಳೇ. 

3 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, 12 ಫಿಲ್ಮ್ ಫೇರ್ ಪ್ರಶಸ್ತಿಗಳು, ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅತಿ ಹೆಚ್ಚು ಬಾರಿ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿಗೆ ನಾಮಕರಣಗೊಂಡ ದಾಖಲೆ ಕೂಡ ಇವರ ಹೆಸರಲ್ಲಿದೆ. 

ಮೊಹಬತೇ, ಕಭಿ ಖುಷಿ ಕಭಿ ಗಮ್, ಬಂಟಿ ಔರ್ ಬಬ್ಲಿ, ಚೀನೀ ಕಮ್, ಸೇರಿದಂತೆ ಸಾಕಷ್ಟು ಚಿತ್ರಗಳು ಇವರಿಗೆ ಭಾರೀ ಹೆಸರನ್ನು ತಂದು ಕೊಟ್ಟವು.  ನಾಗತೀಹಳ್ಳಿ ಚಂದ್ರಶೇಖರ್ ಅವರ ಅಮೃತಧಾರೆ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

loader