ಬಾಲಿವುಡ್ ಚಾಕಲೇಟ್ ಬಾಯ್ ಅರ್ಜುನ್ ಕಪೂರ್ ಮುಂಬರುವ ಚಿತ್ರ  'ಪಾಣಿಪತ್' ಟ್ರೇಲರ್ ರಿಲೀಸ್ ಆಗಿದ್ದು ಇಂಟರ್ ನೆಟ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. 

'ಪಾಣಿಪತ್' ಸಿನಿಮಾದಲ್ಲಿ ಅರ್ಜುನ್ ಕಪೂರ್ ಸದಾಶಿವ್ ರಾವ್ ಬಾಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕೃತಿ ಸನೂನ್ ಪಾರ್ವತಿ ಬಾಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಜಯ್ ದತ್ ಕೂಡಾ ಇದ್ದು ಅಹ್ಮದ್ ಶಾ ಅಬ್ದಾಲಿ ಪಾತ್ರವನ್ನು ಮಾಡಿದ್ದಾರೆ. ಆಶುತೋಷ್ ನಿರ್ದೇಶನ ಮಾಡಿದ್ದಾರೆ. 

 

ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಅಭಿಮಾನಿಗಳ ನಿರೀಕ್ಷೆಯನ್ನು ಹುಸಿ ಮಾಡಿದೆ. ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. 

 

ಸದಾಶಿವ್ ರಾವ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅರ್ಜುನ್ ಕಪೂರ್ ನಟನೆ ತೀರಾ ಬಾಲಿಶವಾಗಿದೆ. ಯೋಧನಿಗಿರಬೇಕಾದ ರಣೋತ್ಸಾಹವೇ ಅವರಿಗಿಲ್ಲ. ಯಾರಿಗೂ ಇದು ಇಷ್ಟವಾಗುವಂತಿಲ್ಲ ಎಂದು ನೆಟ್ಟಿಗರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 


ಟ್ರೇಲರ್ ನೋಡಿ ಟ್ರೋಲ್ ಗಳೂ ಸಿಕ್ಕಾಪಟ್ಟೆ ಆಗಿವೆ. ರಣವೀರ್ ಸಿಂಗ್ ಭಾಜಿರಾವ್ ಮಸ್ತಾನಿ, ಸಂಜಯ್ ದತ್ 'ಪದ್ಮಾವತ್' ಪಾತ್ರ ಮಾಡಿದ ಹಾಗಿದೆ ಎಂದು ಟ್ರೋಲ್ ಮಾಡಲಾಗುತ್ತಿದೆ. 


ಅರ್ಧ ಕೆಜಿ ಪದ್ಮಾವತ್, 1 ಟೇಬಲ್ ಸ್ಪೂನ್ ಅಗ್ನಿಪಥ್, 1 ಕೆಜಿ ಬಾಜಿರಾವ್ ಮಸ್ತಾನಿ ಸೇರಿಸಿದರೆ ಪಾಣಿಪತ್ ರೆಡಿಯಾಗುತ್ತದೆ ಎಂದು ಟ್ರೋಲ್ ಮಾಡಲಾಗುತ್ತಿದೆ. 

Arjun Kapoor Panipat trailer buzz in internet