ಬಾಲಿವುಡ್ ಮೋಸ್ಟ್ ಕ್ಯೂಟ್ ಕಪಲ್ ಅಲಿಯಾ ಭಟ್- ರಣಬೀರ್ ಕಪೂರ್ ಕಡೆಗೂ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ! ಬಾಲಿವುಡ್ ಬಿಗ್ ಸ್ಟಾರ್ ಗಳಾದ ದೀಪಿಕಾ ಪಡುಕೋಣೆ-ರಣವೀರ್ ಸಿಂಗ್, ಪ್ರಿಯಾಂಕ ಚೋಪ್ರಾ- ನಿಕ್ ಮದುವೆ ನಂತರ ಮುಂದಿನ ಸರದಿ ಅಲಿಯಾ- ರಣವೀರ್ ದು ಎಂದು ಹೇಳಲಾಗುತ್ತಿತ್ತು. ಇದೀಗ ದಿಢೀರನೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಮದುವೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

ಅಲಿಯಾ - ರಣವೀರ್ ಕೈಯಲ್ಲಿ ಹೂವಿನ ಹಾರ ಹಿಡಿದುಕೊಂಡಿದ್ದು ಯಾರು ಮೊದಲು ಹಾಕುವುದು ಎಂದು ಒಬ್ಬರನ್ನೊಬ್ಬರು ನೋಡಿ ನಗುತ್ತಿದ್ದಾರೆ! ಆದರೆ ಇದು ನಿಜವಲ್ಲ! ಅಭಿಮಾನಿಗಳು ಫೋಟೋಶಾಪ್ ನಲ್ಲಿ ಕೈಚಳಕ ತೋರಿಸಿದ್ದಾರೆ. 

 

ಅಲಿಯಾ ಭಟ್ ಜಾಹಿರಾತು ಒಂದರಲ್ಲಿ ಮದುಮಗಳ ರೀತಿಯಲ್ಲಿ ಕಾಣಿಸಿಕೊಂಡ ವಿಡಿಯೋವನ್ನು ಕ್ರಾಪ್ ಮಾಡಲಾಗಿದೆ. ಅದೇ ರೀತಿ ರಣಬೀರ್ ಜಾಹಿರಾತೊಂದರಲ್ಲಿ ಮಾಡಲ್ ಕಡೆ ಮುಖ ಮಾಡಿರುವ ಫೋಟೋವನ್ನು ಎಡಿಟ್ ಮಾಡಿದ್ದಾರೆ. ಎಲ್ಲಿಯೂ ಗೊತ್ತಾಗದಂತೆ ಫೋಟೋಶಾಪ್ ಮಾಡಿದ್ದಾರೆ. ಇವರ ಕ್ರಿಯೆಟಿವಿಟಿಗೆ ಒಂದು ಶಹಬ್ಬಾಸ್ ಹೇಳಲೇಬೇಕು. 

ಇದು ಅಲಿಯಾ ಜಾಹಿರಾತು ಫೋಟೋ! 

  ಸೆ.05ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ