ನಟಿಯರಿಗೆ ಚಿತ್ರರಂಗದ ವೃತ್ತಿಯಲ್ಲಿ ಆಯಸ್ಸು ಕಡಿಮೆ ಎನ್ನಬಹುದು. ನಾಯಕಿಯಾಗಿದ್ದ ನಟಿ ಅದೇ ನಾಯಕನಿಗೆ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಉದಾಹರಣೆಯೇ ಹೆಚ್ಚು. ನಾಯಕನಟರಿಗೆ 70 ವರ್ಷವಾದರೂ ಅವರು ಹೀರೋ ಆಗಿಯೇ ನಟಿಸುತ್ತ ಇರುತ್ತಾರೆ. ಆದರೆ, ನಾಯಕಿಯರ ವಿಷಯ ಹಾಗಿಲ್ಲ.
ಬಾಲಿವುಡ್ (Bollywood) ಚಿತ್ರರಂಗ ಎಂದರೆ ಮೊದಲಿನಿಂದಲೂ ಅದೇನೋ ಹಲವು ವಿಶೇಷತೆಗಳ ಆಗರ. ಅಲ್ಲಿನ ಕೆಲವು ವಿಶೇಷತೆಗಳ ಬಗ್ಗೆ ಈಗಾಗಲೇ ಬೆಳಕು ಚೆಲ್ಲಲಾಗಿದೆ. ಇಲ್ಲೊಂದು ಹೊಸ ಸಂಗತಿಯಿದೆ. ಅದೇನೆಂದರೆ, ಹಲವು ನಟಿಯರು ತಂದೆ ಹಾಗೂ ಮಗ (ನಟರು) ಇಬ್ಬರ ಜೊತೆಯಲ್ಲೂ ನಟಿಸಿದ ಅಪರೂಪದ ಸ್ಟೋರಿ ಇದೆ. ನಟಿಯರ ವಿಷಯದಲ್ಲಿ ನಿಜವಾಗಿಯೂ ಇದು ಅಚ್ಚರಿಯ ಸಂಗತಿಯೇ ಸರಿ. ಏಕೆಂದರೆ, ಸಾಮಾನ್ಯವಾಗಿ ನಟಿಯರು ಬೇಗನೇ ತೆರೆಮರೆಗೆ ಸರಿಯುತ್ತಾರೆ.
ಹೌದು, ನಟಿಯರಿಗೆ ಚಿತ್ರರಂಗದ ವೃತ್ತಿಯಲ್ಲಿ ಆಯಸ್ಸು ಕಡಿಮೆ ಎನ್ನಬಹುದು. ನಾಯಕಿಯಾಗಿದ್ದ ನಟಿ ಅದೇ ನಾಯಕನಿಗೆ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಉದಾಹರಣೆಯೇ ಹೆಚ್ಚು. ನಾಯಕನಟರಿಗೆ 70 ವರ್ಷವಾದರೂ ಅವರು ಹೀರೋ ಆಗಿಯೇ ನಟಿಸುತ್ತ ಇರುತ್ತಾರೆ. ಆದರೆ, ನಾಯಕಿಯರ ವಿಷಯದಲ್ಲಿ ಹಾಗಿಲ್ಲ. ನಾಯಕಿಯರಿಗೆ 30 ವರ್ಷ ಆಗುತ್ತಿದ್ದಂತೆ ಅವರು ಹೀರೋಯಿನ್ ಬದಲು ಪೋಷಕ್ ಪಾತ್ರಗಳಿಗೆ ಆಫರ್ ಬರಲು ಶುರುವಾಗಿಬಿಡುತ್ತದೆ. ಇಷ್ಟವಿಲ್ಲದಿದ್ದರೂ ಅವರೂ ಕೂಡ ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಗುತ್ತದೆ.
ಆದರೆ, ಅಚ್ಚರಿಯ ಸಂಗತಿ ಎಂದರೆ, ಕೆಲವು ನಟಿಯರು ಇದಕ್ಕೆ ಅಪವಾದ ಎನ್ನಿಸಿ 'ಎವರ್‌ಗ್ರೀನ್ ಎಕ್ಸಾಂಪಲ್' ಆಗಿದ್ದಾರೆ. ಶ್ರೀದೇವಿ, ಮಾಧುರಿ ದೀಕ್ಷಿತ್, ರಾಣಿ ಮುಖರ್ಜಿ, ಶಿಲ್ಪಾ ಶೆಟ್ಟಿ, ಹೇಮಾ ಮಾಲಿನಿ, ಡಿಂಪಲ್ ಕಾಪಾಡಿಯಾ ಹಾಗೂ ಅಮೃತಾ ಸಿಂಗ್ ಹೀಗೆ ಉದಾಹರಣೆ ಆಗಿದ್ದಾರೆ. ಅದರಲ್ಲೂ ಶ್ರೀದೇವಿ (Sridevi) ಅವರಂತೂ ಚಿಕ್ಕವಯಸ್ಸಿನಲ್ಲೇ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿರುವ ಕಾರಣಕ್ಕೆ ಅವರಿಗೆ ಇಂತಹ ಅವಕಾಶ ಹೇರಳವಾಗಿ ದೊರಕಿದೆ. ನಮ್ಮ ಭಾರತದ ಚಿತ್ರರಂಗದಲ್ಲಿ ನಿಜವಾಗಿಯೂ ಇದು ಶಾಕಿಂಗ್ ಹುಟ್ಟಿಸುವ ಸಂಗತಿಯೇ ಸರಿ. ಅದರಲ್ಲೂ ನಾಯಕಿಯರ ವಿಷಯದಲ್ಲಿ ಅಚ್ಚರಿ ಹುಟ್ಟಿಸುವುದು ಖಂಡಿತ.
ಬಾಲಿವುಡ್ ಹೊರತುಪಡಿಸಿ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಕೂಡ ಇಂತಹ ಉದಾಹರಣೆಗಳು ಇದೆ, ಇಲ್ಲವೇ ಇಲ್ಲ ಅಂತೇನಿಲ್ಲ. ಆದರೆ, ಸ್ವಲ್ಪ ಕಡಿಮೆ ಎನ್ನಬಹುದಷ್ಟೇ. ಹಾಲಿವುಡ್ ಸಿನಿಮಾಗಳಲ್ಲಿ ಇಂತಹ ಉದಾಹರಣೆಗಳು ಸರ್ವೇಸಾಮಾನ್ಯ ಎನ್ನಬಹುದು. ಕಾರಣ, ಅಲ್ಲಿ ನಟನನಟಿಯರ ವಯಸ್ಸು ಮ್ಯಾಟರ್ ಆಗೋದೇ ಇಲ್ಲ. ಕಾರಣ, ಅಲ್ಲಿ ನಟನಟಿಯರ ವಯಸ್ಸಿಗೆ ಇಂಪಾರ್ಟನ್ಸ್ ಕಡಿಮೆ ಎನ್ನಬಹುದು. ಅಲ್ಲಿ ಪಾತ್ರಗಳಿಗೆ ಜೀವತುಂಬಿ ನಟಿಸಿದರೆ ಆಯ್ತು ಅಷ್ಟೇ. ಹೆಚ್ಚಾಗಿ ಫ್ಯಾಂಟಸಿ ಸಿನಿಮಾಗಳೇ ಅಲ್ಲಿ ನಿರ್ಮಾಣ ಆಗುವ ಕಾರಣಕ್ಕೆ ನಟನಟಿಯರ ಏಜ್ ಅಷ್ಟಾಗಿ ಮಖ್ಯವಾಗುವುದಿಲ್ಲ.
