ಮುಂಬೈ (ಫೆ. 2): ’ಕಹಾನಿ’ ಖ್ಯಾತಿಯ ನಟಿ ವಿದ್ಯಾ ಬಾಲನ್ ಇತ್ತೀಚಿಗೆ 40 ನೇ ಹುಟ್ಟುಹಬ್ಬ ಆಚರಿಸಿಕೊಂಡರು.

ವಯಸ್ಸು ನಲವತ್ತು ದಾಟಿದರೂ ಮಾಸದ ಸೌಂದರ್ಯ, ಆಕಾರಗೆಡದ ದೇಹ, ಅದೇ ಸೌಂದರ್ಯ.. ಅದೇ ಮಾದಕತೆಯನ್ನು ಇನ್ನೂ ಉಳಿಸಿಕೊಂಡಿದ್ದಾರೆ. ಇದಕ್ಕಾಗಿ ವರ್ಕೌಟ್, ಬ್ಯೂಟಿ ಪಾರ್ಲರ್, ಕ್ರೀಮು, ಸರ್ಜರಿ ಎಲ್ಲಾ ಮಾಡಿಸ್ಕೋಬೋದು ಎಂದು ಯೋಚಿಸುತ್ತಿದ್ದೀರಾ? ಖಂಡಿತಾ ಇಲ್ಲ. ಅವರ ಯೌವನದ ಗುಟ್ಟನ್ನು ಅವರೇ ಬಿಚ್ಚಿಟ್ಟಿದ್ದಾರೆ. ಜೊತೆಗೆ ಇತರೆ ಮಹಿಳೆಯರಿಗೆ ಸಲಹೆಯನ್ನು ನೀಡಿದ್ದಾರೆ.

 

"ನಲವತ್ತು ದಾಟಿದ ನಂತರ ಮಹಿಳೆಯರು ಇನ್ನಷ್ಟು ತುಂಟಿಯಾಗಿ ಕಾಣಿಸುತ್ತಾರೆ. ಈ ವಯಸ್ಸಿನಲ್ಲಿ ಗಂಡ, ಮಕ್ಕಳು, ಸಂಸಾರ ಎಂದು ಕಳೆದು ಹೋಗಿರುತ್ತಾರೆ. ಅವರ ಬಗ್ಗೆ ಅವರಿಗೆ ಕೇರ್ ಇರುವುದಿಲ್ಲ. ಇದು ಒಂದು ರೀತಿ ಸೌಂದರ್ಯ ತಂದು ಕೊಡುತ್ತದೆ" ಎಂದು ವಿದ್ಯಾ ಬಾಲನ್ ಹೇಳಿದ್ದಾರೆ. 

" ನಾನು ನಲವತ್ತರ ನಂತರ ನನ್ನ ಬಗ್ಗೆ ಹೆಚ್ಚು ಗಮನ ಕೊಡಲಾರಂಭಿಸಿದ್ದೇನೆ. ಪ್ರತಿಯೊಂದು ಸಂಗತಿಯನ್ನು ಎಂಜಾಯ್ ಮಾಡುತ್ತಿದ್ದೇನೆ. ಜಗತ್ತಿನ ಭಾರವನ್ನೆಲ್ಲಾ ನನ್ನ ಹೆಗಲ ಮೇಲೆ ಹಾಕಿಕೊಳ್ಳುವುದಿಲ್ಲ. 20 ರ ವಯಸ್ಸಿನಲ್ಲಿ ಕನಸನ್ನು ಬೆನ್ನತ್ತಿ ಹೋದೆ. 30 ರ ನಂತರ ನನ್ನ ಬಗ್ಗೆ ನಾನು ಅರಿತುಕೊಳ್ಳಲು ಶುರು ಮಾಡಿದೆ. 40 ರ ನಂತರ ಲೈಫನ್ನು ಎಂಜಾಯ್ ಮಾಡಲು ಶುರು ಮಾಡಿಕೊಂಡೆ"  ಎಂದು ಹೇಳಿದ್ದಾರೆ.