ಸುಶ್ಮಿತಾ ಸೇನ್ ಸೊಂಟ ಬಳಕಿಸುವುದನ್ನು ನೋಡಿದ್ರೆ ಫಿದಾ ಆಗ್ತೀರಿ | ದುರ್ಗಾ ಪೂಜೆಯಲ್ಲಿ ಸುಶ್ಮಿತಾ ಧನೂಚಿ ನಾಚ್ ನೃತ್ಯ | 

ಕೊಲ್ಕತ್ತಾ (ಅ. 17): ಧನೂಚಿ ನೃತ್ಯದ ಮಾಡದ ಹೊರತು ಬಂಗಾಲಿಗಳ ಹಬ್ಬ ದುರ್ಗಾ ಪೂಜೆ ಮುಕ್ತಾಯವಾಗುವುದೇ ಇಲ್ಲ. ಇದು ದುರ್ಗಾಪೂಜೆಯ ಅವಿಭಾಜ್ಯ ಅಂಗವೂ ಹೌದು. 

ನಟಿ ಸುಶ್ಮಿತಾ ಸೇನ್ ಸ್ನೇಹಿತೆಯರೊಡನೆ ಧನೂಚಿ ನೃತ್ಯ ಮಾಡಿ ಗಮನ ಸೆಳೆದಿದ್ದಾರೆ. ಜೊತೆಗೆ ಇವರ ಮಕ್ಕಳೂ ಇರುವುದು ವಿಶೇಷ. ಈ ವಿಡಿಯೋವನ್ನು ಸುಶ್ಮಿತಾ ಸೇನ್ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದು ದುರ್ಗಾ ಪೂಜೆ ಆಚರಣೆಯಲ್ಲಿ ನನ್ನ ಮಕ್ಕಳ ಜೊತೆ ಡ್ಯಾನ್ಸ್ ಮಾಡಿದ್ದು ಭಕ್ತಿಭಾವವನ್ನು ಇನ್ನಷ್ಟು ಹೆಚ್ಚಿಸಿತು. ಇದು ನಮ್ಮಲ್ಲಿ ಪ್ರೀತಿ, ವಿಶ್ವಾಸ, ಆತ್ಮೀಯತೆ ಇವೆಲ್ಲವನ್ನು ಹೆಚ್ಚಿಸಿತು ಎಂದು ಬರೆದುಕೊಂಡಿದ್ದಾರೆ. 

View post on Instagram

ಕೆಂಪು ಬಣ್ಣದ ರವಿಕೆ, ಬಂಗಾರದ ಬಣ್ಣದ ಸೀರೆಯಲ್ಲಿ ಥೇಟ್ ಬಂಗಾಳಿ ಲುಕ್ ನಲ್ಲಿ ಸುಶ್ಮಿತಾ ಸೇನ್ ಕಂಗೊಳಿಸುತ್ತಿದ್ದರು. 


Sushmita Sen performs ‘dhunuchi naach’ in Durga Puja 

View post on Instagram