ಬಾಲಿವುಡ್ ಸ್ಲಿಮ್ ಬೆಡಗಿ ಶಿಲ್ಪಾ ಶೆಟ್ಟಿ ಹಾಲಿಡೇ ಎಂಜಾಯ್ ಮಾಡಲು ಕುಟುಂಬ ಸಮೇತ ಲಂಡನ್ ಮತ್ತು ಗ್ರೀಸ್ ಗೆ  ಹಾರಿದ್ದಾರೆ. 

ಹಾಲಿಡೇ ಮೂಡ್ ನಲ್ಲಿರುವ ಶಿಲ್ಪಾ ಶೆಟ್ಟಿ ಅಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಶಿಪ್ ಮೇಲೆ ನಿಂತು ರೊಮ್ಯಾಂಟಿಕ್ ಆಗಿ ಪೋಸ್ ಕೊಟ್ಟಿದ್ದೇನೋ ನಿಜ. ಪೋಸ್ ಕೊಡುವಾಗ ಜೋರಾಗಿ ಗಾಳಿ ಬೀಸಿ ಡ್ರೆಸ್ ಮೇಲೆತ್ತಿ ಹೋಗಿದೆ. ಈ ಪೋಟೋವನ್ನು ಶೇರ್ ಮಾಡಿದ ಶಿಲ್ಪಾ, ‘ಮರ್ಲಿನ್ ಮನ್ರೋ’  ಮೂಮೆಂಟ್ ಎಂದು ಬರೆದುಕೊಂಡಿದ್ದಾರೆ. 

 

ಹಾಲಿವುಡ್ ನ ದಿ ಸೆವೆನ್ ಇಯರ್ ಇಚ್ ಎಂಬ ಸಿನಿಮಾದಲ್ಲಿ ಮರ್ಲಿನ್ ಮನ್ರೋ ಶಿಪ್ ಮೇಲೆ ನಿಂತು ಸಮುದ್ರವನ್ನು ನೋಡುತ್ತಾ ಪೋಸ್ ಕೊಡುತ್ತಿರುತ್ತಾರೆ. ಆಗ ಜೋರಾಗಿ ಗಾಳಿ ಬೀಸಿದ್ದರಿಂದ ಅವರು ಹಾಕಿದ್ದ ಡ್ರೆಸ್ ಮೇಲೆತ್ತಿ ಹೋಗುತ್ತದೆ. ಇದು ‘ಮರ್ಲಿನ್ ಮನ್ರೋ’  ಪೋಸ್ ಎಂದೇ ಫೇಮಸ್ ಆಗಿದೆ.

ಲಂಡನ್ ಹಾಗೂ ಗ್ರೀಸ್ ನಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿರುವ ಶಿಲ್ಪಾ ಶೆಟ್ಟಿ ಆಗಸ್ಟ್ ಮೊದಲ ವಾರ ಮುಂಬೈಗೆ ಹಿಂತಿರುಗಲಿದ್ದಾರೆ. ವಾಪಸ್ಸಾದ ಬಳಿಕ ಆಸೀಸ್ ಮಿರ್ಜಾ ಸಿನಿಮಾದ ಮೂಲಕ ಬಾಲಿವುಡ್ ಗೆ ವಾಪಸ್ಸಾಗಲಿದ್ದಾರೆ.