ಮುಂಬೈ, [ಸೆ.29]: ಬಾಲಿವುಡ್​ ಐಟಂ ಸಾಂಗ್ ಬೆಡಗಿ ರಾಖಿ ಸಾವಂತ್​ಗೆ ಅದೇನಾಗಿದ್ಯೋ ಗೊತ್ತಿಲ್ಲ. ಚಿತ್ರ-ವಿಚಿತ್ರವಾಗಿ ಆಡುತ್ತಿದ್ದಾರೆ.

ಈ ಹಿಂದೇ ಸ್ತನದಾನ ಮಾಡ್ತೀನಿ ಅಂತಾ ಹೇಳಿಕೆ ಕೊಟ್ಟು ಸುದ್ದಿಯಾಗಿದ್ದ ರಾಖಿ, ಇದೀಗ ಟಾಯ್ಲೆಟ್​ ಕಮೋಡ್​ ಮೇಲೆ ಕೂತು ವಿಡಿಯೋ ಮಾಡಿ ಇನ್​ಸ್ಟಾಗ್ರಾಮ್​ನಲ್ಲಿ ಹರಿಬಿಟ್ಟಿದ್ದಾಳೆ. ವಿಶೇಷ ಅಂದರೆ ರಾಖಿ ಹೀಗೆ ಮಾಡೋದಕ್ಕೆ ಕಾರಣ ಇದೆ.  

ಸ್ತನಗಳ ದಾನಕ್ಕೆ ಮುಂದಾದ ರಾಖಿ! ಹಿಂದಿರುವ ಕಾರಣ ಏನು?

ರಾಖಿಗೆ ಮಲಬದ್ಧತೆಯಂತೆ. ಹೌದು, ಈ ಬಗ್ಗೆ ಸ್ವತಃ ಹೇಳಿಕೆ ನೀಡಿರುವ ರಾಖಿ, ತನ್ನ ಮಲಬದ್ಧತೆಗೆ ಕಾರಣ ಮೈಕ್​ ಟೈಸನ್​ ಅಂತಾ ಹೇಳಿಕೊಂಡಿದ್ದಾಳೆ.ಅಲ್ಲದೇ ಟಾಯ್ಲೆಟ್​ನ ಕಮೋಡ್​ ಮೇಲೆ ಕುಳಿತು, ತನಗೆ ಲವ್​ ಆಗಿದೆ ಅಂತಾ ಹಾಡನ್ನು ಕೂಡ ಹಾಡಿದ್ದಾಳೆ.

ಸದ್ಯ ರಾಖಿಯ ಈ ವಿಡಿಯೋ ಸಖತ್​ ಟ್ರೋಲ್​ ಆಗಿದ್ದು, ಆಕೆಯ ಅವತಾರಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ಡಿಫ್ರೆಂಟ್ ಡಿಫ್ರೆಂಟ್​ ಕಾಮೆಂಟ್ಸ್​ ಮಾಡ್ತಿದ್ದಾರೆ.