ಮುಂಬೈ, [ಸೆ.25]: ಬಾಲಿವುಡ್ ನ ಹಾಟ್ ನಟಿ ರಾಖಿ ಸಾವಂತ್ ಯಾರಿಗೆ ಗೊತ್ತಿಲ್ಲ ಹೇಳಿ. ತನ್ನ ವಿವಾದಾತ್ಮಕ ನಡೆ-ನುಡಿ ಹಾಗೂ ಹೇಳಿಕೆಗಳಿಂದಲೇ ಫೇಮಸ್.

ಅಷ್ಟೇ ಅಲ್ಲದೇ ಹಾಗಾಗ ಸಾಮಾಜಿಕ ಜಾಲತಾಣಗಳಲ್ಲಿ ಪಡ್ಡೆ ಹೈಕ್ಳ ನಿದ್ದೆಗೆಡಿಸುತ್ತಿದ್ದ ರಾಖಿ ಸಾವಂತ್ ಮತ್ತೆ ಸುದ್ದಿಯಾಗಿದ್ದಾರೆ. ಎಲ್ಲರು ಕಣ್ಣು, ಹೃದಯ, ಕಿಡ್ನಿ ಧಾನ ಮಾಡಿದರೆ, ರಾಖಿ ಸಾವಂತ್ ತಮ್ಮ ಸ್ತನಗಳನ್ನು ದಾನ ಮಾಡಲು ಮುಂದಾಗಿದ್ದಾರೆ.

39 ವರ್ಷದ ರಾಕಿ ಸಾವಂತ್​, ತಮ್ಮ ಸ್ತನಗಳನ್ನು ದಾನ ಮಾಡಬೇಕೆಂದುಕೊಂಡಿದ್ದೇನೆ ಎಂದು ಘೋಷಿಸಿದ್ದರು. ಆದರೆ ಆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟೆ ಟ್ರೋಲ್​ ಆಗುತ್ತಿದೆ. 

ಮೊದಲೇ ಬಕ ಪಕ್ಷಿಗಳಂತೆ ಕಾದು ಕೂತಿರುವ ಟ್ರೋಲ್ ಗಾರರಿಗೆ ರಾಖಿ ಸಾವಂತ್ ಆಹಾರವಾಗಿದ್ದಾರೆ. ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋವನ್ನು ಈಗಾಗಲೇ ಒಂದು ಮಿಲಿಯನ್​ ಜನರು ವೀಕ್ಷಿಸಿದ್ದು, ವಿಡಿಯೋ ನೋಡಿದ ನೆಟ್ಟಿಗರು ತಮ್ಮದೇ  ಅಭಿಪ್ರಾಯಗಳ ಮೂಲಕ ಟ್ರೋಲ್​ ಮಾಡುತ್ತಿದ್ದಾರೆ.

ವೈರಲ್​ ಆಗಿರುವ ವಿಡಿಯೋದಲ್ಲಿ  ನೇತ್ರದಾನ ಮಾಡಿರುವ ಐಶ್ವರ್ಯ ರೈ ಬಚ್ಚನ್​ ಅವರನ್ನು ಕೊಂಡಾಡಿದ್ದಾರೆ. ಜನರು ತಮ್ಮ ಅಂಗಾಗಳನ್ನು ದಾನ ಮಾಡುವ ಮೂಲಕ ಉತ್ತಮ ಕಾರ್ಯಗಳನ್ನು ಮಾಡುತ್ತಾರೆ. ನಾನು ಕೂಡ ಅವರನ್ನೇ ಹಿಂಬಾಲಿಸಬೇಕೆಂದುಕೊಂಡಿದ್ದೇನೆ. ಆದ್ದರಿಂದ ನಾನು ನನ್ನ ಸ್ತನಗಳಗಳನ್ನು ದಾನ ಮಾಡುವುದಾಗಿ ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.

ಸ್ತನ ಕ್ಯಾನ್ಸರ್​ನಿಂದ ಬಳಲುವ ಮಹಿಳೆಯರ ಅಂಗಾಂಗವನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಲಾಗುತ್ತದೆ. ಆದ್ದರಿಂದ ನಾನೇಕೆ ನನ್ನ ಸ್ತನಗಳನ್ನು ದಾನ ಮಾಡಬಾರದು? ಎಂದು ನಾನು ಯೋಚಿಸಿದೆ. ಈ ನಿರ್ಧಾರದಿಂದ ಗದ್ದಲ ಸೃಷ್ಟಿಯಾದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ