ಇಂಟರ್‌ನೆಟ್ ಸೆನ್ಸೆಶನ್ ಕ್ವೀನ್ ಮಲೈಕಾ ಅರೋರಾ ಏನೇ ಮಾಡಿದ್ರೂ ಟಾಕ್‌ ಆಫ್‌ ದಿ ಟೌನ್ ಆಗುವುದಂತೂ ಗ್ಯಾರಂಟಿ. ಅದರಲ್ಲೂ ಯಂಗ್ ಲುಕ್‌ ನೀಡುವಂತಹ ಡ್ರೆಸ್ ಗಳನ್ನು ಹಾಕಿಕೊಂಡು ಹೆಚ್ಚು ಗಮನ ಸೆಳೆಯುತ್ತಾರೆ.

ಕೈ ಎತ್ತಿ ಪೋಸ್ ಕೊಟ್ಟ ಮಲೈಕಾಗೆ ಕಾಡಿದ ಕಂಕುಳ ಕೂದಲು

ಕೆಲ ದಿನಗಳ ಹಿಂದೆ ವೋಗೋ ಬ್ಯೂಟಿ ಅವಾರ್ಡ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಾರಾ ಅಲಿ ಖಾನ್, ರಾಧಿಕಾ ಆಪ್ಟೆ, ಶಾಹೀದ್ ಕಪೂರ್, ರಕುಲ್ ಸಿಂಗ್, ಆಲಿಯಾ ಭಟ್ ಸೇರಿದಂತೆ ಹಲವು ಬಾಲಿವುಡ್‌ ಸ್ಟಾರ್‌ಗಳು ಪಾಲ್ಗೊಂಡಿದ್ದರು. ಇವರೆಲ್ಲರ ನಡುವೆ ಗಮನ ಸೆಳೆದದ್ದು ಮಲೈಕಾ ಹಾಟ್‌ ಲುಕ್.

 

 

ವೈಟ್‌ ಟ್ರಾನ್ಸ್ ಪರೆಂಟ್ ಗೌನ್‌ ಧರಿಸಿದ್ದು ಫೋಟೋಗಳನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇನ್ನು ಬಾಯ್ ಫ್ರೆಂಡ್ ಅರ್ಜುನ್ ಕಪೂರ್ ಫೋಟೋಗೆ ಫೈರ್ ಸಿಂಬಲ್ ಕಾಮೆಂಟ್ ಮಾಡಿದರೆ ನೆಟ್ಟಿಗರು 'ಇಷ್ಟೆಲ್ಲಾ ತೋರಿಸುವುದು ಬೇಕಾ?', 'ಇಂತಹ ವಯಸ್ಸಲ್ಲಿ ಏನಿದು’? 'ಈ ತರ ಆಡಿದರೆ ನಿಮ್ಮ ಮಕ್ಕಳಿಗೆ ನಿಮ್ಮ ಮೇಲೆ ಗೌರವವಿರುವುದಿಲ್ಲ' ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

 

ವರ್ಕೌಟ್‌ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸುವ ಮಲೈಕಾ ಎರಡು ಕೈಗಳನ್ನು ಎತ್ತಿ ಪೋಸ್ ಕೊಟ್ಟಿದ್ದು ಕೆಲವರ ಕಣ್ಣು ಆಕೆಯ ಕಂಕುಳ ಮೇಲೆ ಬಿದ್ದಿದ್ದು ಕಾಮೆಂಟ್‌ಗಳಿಗೆ ಗುರಿಯಾಗಿದ್ದರು.