‘ಮುಸಾಫಿರ್’ ಚಿತ್ರದ ನಟಿ ಕೊಯ್ನಾ ಮಿತ್ರಾ ಸ್ನೇಹಿತೆ ಮಾಡೆಲ್ ಪೂನಮ್ ಸೇಥಿ ಬಳಿ 22 ಲಕ್ಷ ಸಾಲ ಪಡೆದಿದ್ದು 19 ಲಕ್ಷವನ್ನು ತೀರಿಸಿದ್ದಾರೆ. ಉಳಿದ 3 ಲಕ್ಷಕ್ಕೆ ಚೆಕ್‌ ನೀಡಿದ್ದರು ಆದರೆ ಚೆಕ್‌ ಬೌನ್ಸ್ ಆದ ಕಾರಣ ಕೊಯ್ನಾ ವಿರುದ್ಧ 2013 ರಲ್ಲಿ ದೂರು ದಾಖಲಾಗಿತ್ತು. ಉಳಿದ 3 ಲಕ್ಷಕ್ಕೆ 1.64 ರೂ ಲಕ್ಷ ಬಡ್ಡಿ ಬೆಳೆದಿದ್ದು ಒಟ್ಟು 4.64 ರೂ ಮೊತ್ತ ನೀಡಬೇಕಿದೆ.

ನಟಿ ಮೇಲೆ ಅತ್ಯಾಚಾರ ಆರೋಪ; ನಟನಿಗೆ ತಾತ್ಕಾಲಿಕ ರಿಲೀಫ್!

ಈ ಹಿಂದೆ ಕೋರ್ಟ್ ವಿಚಾರಣೆ ವೇಳೆ, ಪೂನಮ್ ಗೆ ಹಣದ ಅವಶ್ಯಕತೆ ಇದ್ದ ಕಾರಣ ನನ್ನ ಚೆಕ್‌ ಬುಕ್ಕನ್ನು ಕದ್ದಿದ್ದಾರೆ. ಈಗ ಇಂತಹ ಆರೋಪ ಮಾಡುತ್ತಿದ್ದಾರೆ. ಯಾವುದೇ ಸಾಕ್ಷಿ ಇಲ್ಲದ ಕಾರಣ ಕೋರ್ಟ್ ಇದನ್ನು ನಿರಾಕರಿಸಿತ್ತು. ದಿನದಿಂದ ದಿನಕ್ಕೆ ಮುಂದೂಡಿದ ವಿಚಾರಣೆ ಕೊನೆ ದಿನ ತೀರ್ಪಿನಂದು ಕೊಯ್ನಾ ಪರ ವಕೀಲರು ಬರದ ಕಾರಣ ಕೊಯ್ನಾ ಸಾಬೀತು ಮಾಡುವುದರಲ್ಲಿ ವಿಫಲರಾಗಿದ್ದಾರೆ. ಕೊಯ್ನಾಗೆ ಕೋರ್ಟ್ 6 ತಿಂಗಳು ಜೈಲು ಶಿಕ್ಷೆ ನೀಡಿದೆ.