Asianet Suvarna News Asianet Suvarna News

ಅಲ್ಲಿ ದಿಟ್ಟಿಸಿದ್ದಕ್ಕೆ ಅರ್ಧಕ್ಕೆ ಪ್ರವಾಸ ನಿಲ್ಲಿಸಿದ ಬಾಲಿವುಡ್ ನಟಿ!

ಮತ್ತೊಬ್ಬ ಬಾಲಿವುಡ್ ನಟಿ ತನಗಾದ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ. ಯೇ ಹೈ ಮೊಹಬತೇನ್ ಚಿತ್ರದ ಮೂಲಕ ಗಮನ ಸೆಳೆದಿದ್ದ ಕರಿಶ್ಮಾ ಶರ್ಮಾ ತಮಗಾದ ಲೈಂಗಿಕ ಕಿರುಕುಳದ ವಿಚಾರವನ್ನು ಹೇಳಿದ್ದಾರೆ.

Bollywood actress Karishma Sharma opens up about being harassed while vacationing in Dharamshala
Author
Bengaluru, First Published Sep 25, 2018, 10:27 PM IST
  • Facebook
  • Twitter
  • Whatsapp

ರಜಾ ದಿನಗಳನ್ನು ಕಳೆಯಲು ಕರಿಶ್ಮಾ ಶರ್ಮಾ ಧರ್ಮಶಾಲಾಕ್ಕೆ ತೆರಳಿದ್ದರು. ಈ ವೇಳೆ ಇಂಥದ್ದೊಂದು ಕೆಟ್ಟ ಸಂಕಟಕ್ಕೆ ಗುರಿಯಾಗಿದ್ದಾರೆ.  ತಮ್ಮ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡುತ್ತ ಕರಾಳ ಅನುಭವ ಬಿಚ್ಚಿಟ್ಟಿದ್ದಾರೆ.  ಸುಂದರ ದೇವಾಲಯವೊಂದಕ್ಕೆ ನನ್ನ ಸ್ನೇಹಿತರ ಜತೆ ತೆರಳಿದ್ದೆ. ನಾವು ಫೋಟೋ ತೆಗದುಕೊಳ್ಳುತ್ತಿದ್ದೇವು. ಕೆಲ ಸಮಯದಲ್ಲಿ ಹಿಂದೆ ತಿರುಗಿ ನೋಡಿದರೆ ನಮ್ಮ ಹಿಂದೆ 15 ಜನರ ಗುಂಪಿತ್ತು.

ಅವರು ನಮ್ಮನ್ನೇ ನೋಡುತ್ತಿದ್ದುದಲ್ಲದೆ ನನ್ನ ಎದೆ ಭಾಗವನ್ನೇ ದಿಟ್ಟಿಸುತ್ತಿದ್ದರು. ಇದಾದ ತಕ್ಷಣವೇ ನಾವು ಅಲ್ಲಿಂದ ಜಾಗ ಖಾಲಿ ಮಾಡಿದೆವು. ಹತ್ತಿರದ ಪೊಲೀಸರಿಗೆ ತಿಳಿಸಿದರೆ ಅವರು ವ್ಯಂಗ್ಯದ ನಗು ಹೊರಹಾಕಿದರು ಎಂದು ಆತಂಕ ವ್ಯಕ್ತಪಡಿಸಿದರು.

Follow Us:
Download App:
  • android
  • ios