ಮುಂಬೈ (ಏ.02): ಕಳೆದ ಫೆಬ್ರವರಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ ಬಾಲಿವುಡ್‌ ನಟಿ ದಿಯಾ ಮಿರ್ಜಾ ಮತ್ತು ವೈಭವ್‌ ರೇಖಿ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಸ್ವತಃ ತಿಳಿಸಿದ್ದಾರೆ.

 ದಿಯಾ ಮಿರ್ಜಾ ಅವರು ಗುರುವಾರ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಬೇಬಿ ಬಂಪ್‌ ಫೋಟೋ ಪ್ರಕಟಿಸಿ ಸಂತಸವನ್ನು ಹಂಚಿಕೊಂಡಿದ್ದಾರೆ. 

 

ದಿಯಾ ಕಳೆದ ಫೆ.15ರಂದು ಉದ್ಯಮಿ ವೈಭವ್‌ ರೇಖಿ ಅವರನ್ನು ವಿವಾಹವಾಗಿದ್ದರು. ಅದಕ್ಕೂ ಮೊದಲು ಸಿನಿಮಾ ನಿರ್ಮಾಪಕ ಶಾಹಿಲ್‌ ಸಂಘಾ ಅವರನ್ನು ವಿವಾಹವಾಗಿ 2019ರಲ್ಲಿ ವಿಚ್ಛೇದನ ನೀಡಿದ್ದರು.