ಬಾಲಿವುಡ್ ಡಿಂಪಲ್ ಚೆಲುವೆ ದೀಪಿಕಾ ಪಡುಕೋಣೆ ಯಾವಾಗಲೂ ಬಿ ಟೌನ್ ನಲ್ಲಿ ಸುದ್ದಿಯಲ್ಲಿರುತ್ತಾರೆ. ಇವರು ಹೇಗೆ ಇದ್ರು ಜನ ಕಮೆಂಟ್ ಮಾಡ್ತಾ ಇರ್ತಾರೆ. ಇದೀಗ ಅವರ ಮೂಗಿಗಾಗಿ ಟ್ರೋಲ್ ಆಗಿದ್ದಾರೆ. 

ಇತ್ತೀಚಿಗೆ ದೀಪಿಕಾ ಪಡುಕೋಣೆ ಜ್ಯುವೆಲ್ಲರಿ ಕಂಪನಿಗಾಗಿ ಫೋಟೋಶೂಟ್ ಮಾಡಿಸಿದ್ದರು. ಹಸಿರು ಬಣ್ಣದ ಉಡುಪು ಧರಿಸಿ ಆಕರ್ಷಕವಾಗಿ ಕಾಣಿಸಿದ್ದಾರೆ. ದೀಪಿಕಾ ಲುಕ್ ಅಭಿಮಾನಿಗಳಿಗೆ ಇಷ್ಟ ಆಗಿದೆ. 

 

ಆದರೆ ಈ ಫೋಟೋದಲ್ಲಿ ಡಿಪ್ಪಿ ಮೂಗು ಸ್ವಲ್ಪ ಉದ್ದವಾಗಿ ಕಾಣಿಸುತ್ತದೆ. ಅದನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ‘ಡಿಪ್ಪಿ ಮೂಗನ್ನು ನೋಡಿ. ಫೋಟೋಶೂಟ್ ಸರಿಯಾಗಿ ಮಾಡಿಲ್ಲ ಎಂದು ಕೆಲವರು ಟೀಕಿಸಿದರೆ ಮೇಕಪ್ ಆರ್ಟಿಸ್ಟ್ ಮೂಗಿನ ಮೇಲಿನ ಮೇಕಪ್ ತೆಗೆಯಲು ಮರೆತಿದ್ದಾನೆ ಎಂದು ಕಾಲೆಳೆದಿದ್ದಾರೆ.