ಹೆಣ್ಣು ಎಷ್ಟೇ ಬೆಳೆದರೂ ಅಪ್ಪನಿಗೆ ಮಾತ್ರ ಇನ್ನು ಸಣ್ಣ ಮಗುವæೕ. ಮಗಳಿಗೋ ಅಪ್ಪ ಒಬ್ಬ ರೋಲ್ ಮಾಡೆಲ್, ಲೈಫ್‌ಟೈಮ್ ಹೀರೋ. ಸದ್ಯಕ್ಕೀಗ ಅಪ್ಪ ಮಗಳ ಬಾಂಧವ್ಯಕ್ಕೆ ಉದಾಹರಣೆಯಾಗಿ ನಿಂತಿದ್ದಾರೆ ಬಾಲಿವುಡ್ ನಟಿ ಆಲಿಯಾ ಭಟ್ ಹಾಗೂ ಅವರ ತಂದೆ ಮಹೇಶ್. ಕಾರಣ ಆಲಿಯಾ ತನ್ನ ತಂದೆಗೆ ಹುಟ್ಟಿದ ಹಬ್ಬಕ್ಕೆ ಶುಭಾಶಯ ಕೋರಿ ಎಲ್ಲರ ಗಮನ ಸೆಳೆದಿದ್ದಾರೆ.
ಆಲಿಯಾ ಭಟ್ ಸಾಮಾಜಿಕ ಜಾಲತಾಣದಲ್ಲಿ ತನ್ನ ಬಾಲ್ಯಕಾಲದ ಫೋಟೋ ಹಾಕಿಕೊಂಡಿದ್ದಾರೆ. ಅದರಲ್ಲಿ ಚಬ್ಬಿ ಕೆನ್ನೆಗಳ ಪುಟಾಣಿ ಅಲಿಯಾಳ ಹಿಂದೆ ಫೋನ್‌ನಲ್ಲಿ ಸಂಭಾಷಣಾ ನಿರತರಾದ ಮಹೇಶ್ ಭಟ್ ಇದ್ದಾರೆ. ಇಂಥಾ ಅಪರೂಪದ ಫೋಟೋವನ್ನು ಅಪ್‌ಲೋಡ್ ಮಾಡಿ ಅಲಿಯಾ ಅಪ್ಪನಿಗೆ ವಿಶ್ ಮಾಡಿದ್ದಾರೆ. ಅದರಲ್ಲಿ ಕೆಲ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
’ಮೋಸ್ಟ್ ಇನ್ಸ್ಪೈರಿಂಗ್ ಏಷಿಯನ್ ವುಮೆನ್’ ಗೆ ಅಲಿಯಾ ಭಟ್ ಆಯ್ಕೆ!
ಆ ಪೋಸ್ಟ್‌ನಲ್ಲಿ ಅವರು ‘ಹೇ ಅಪ್ಪ, ಸುಮಾರು 26 ವರ್ಷಗಳಿಂದ ನಿನ್ನ ಬಗ್ಗೆ ತಿಳಿದುಕೊಳ್ಳುತ್ತಿದ್ದೇನೆ. ನನಗೆ ಅತ್ಯುತ್ತಮ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತೀಯ. ಅಪಾರ ಪ್ರತಿಭಾನ್ವಿತನಾದ ನೀನು, ತಮಾಷೆಗೂ ಸೈ. ಪ್ರತೀ ದಿನವೂ ಅದ್ಭುತವಾಗಿ ಕಾಣಿಸಿಕೊಳ್ಳುತ್ತೀಯ. ನಿನ್ನಂತ ತಂದೆ ಯಾರೂ ಇಲ್ಲ. ಹ್ಯಾಪಿ ಬತ್‌ರ್ ಡೇ ಡ್ಯಾಡಿ. ಐ ಲವ್ ಯು’ ಎಂದು ಮಜವಾಗಿ ತಂದೆಗೆ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ.
ಆಲಿಯಾ ಅವರ ಈ ಪೋಸ್ಟ್‌ಗೆ ಟ್ವಿಟ್ಟರ್‌ನಲ್ಲಿ ಉತ್ತರಿಸಿರುವ ಮಹೇಶ್ ‘ನಿನ್ನ ಈ ವಿಶ್‌ನಿಂದ ರೋಮಾಂಚನವಾಗಿದೆ. ಜೀವನ ಪೂರ್ತಿ ನೀನೇನು ಮಾಡಿದೆ ಎನ್ನುವುದರ ಬಗ್ಗೆ ಇಲ್ಲಿದೆ. ಇನ್ನೊಬ್ಬರನ್ನು ಅನುಸರಿಸದೆ ಮನುಷ್ಯ ಎಂದಿಗೂ ಮನುಷ್ಯನಾಗಿ ಉಳಿಯುವುದಿಲ್ಲ. ಆದರೆ ನನ್ನನ್ನು ಅನುಸರಿಸಬೇಡ. ಏಕೆಂದರೆ ನಿನ್ನ ವಿಶ್‌ನಿಂದ ನಾನು ತುಂಬಾ ಕಳೆದುಹೋಗಿದ್ದೇನೆ’ ಎಂದು ಹೇಳಿದ್ದಾರೆ.
